ಬಹುಭಾಷಾ ನಟಿ ಸಮಂತಾ ವೈಯಕ್ತಿಕ ಬದುಕಿನಲ್ಲಿ ಮತ್ತೊಂದು ಪುಟ ತೆರೆಯಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಇದೆ. ಸ್ಯಾಮ್ ಮತ್ತೊಂದು ಮದುವೆಯಾಗಲಿದ್ದಾರೆ ಸುದ್ದಿ ಹರಿದಾಡುತ್ತಿದೆ. ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಸ್ಯಾಮ್ ರಾಜಗ ತೋಳಲ್ಲಿ ಬಂಧಿಯಾಗಿರುವ ಫೋಟೋ ಹಾಕಿದ್ದು, ಮದುವೆ ಗಾಸಿಪ್‌ಗೆ ಈ ಫೋಟೋ ತುಪ್ಪ ಸುರಿದಂತಿದೆ.
ಸಮಂತಾ ನಟನೆ ಜೊತೆಗೆ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರ ನಿರ್ಮಾಣದ ಶುಭಂ ಚಿತ್ರ ತೆರೆಗೆ ಬಂದಿದ್ದು, ಒಂದೊಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಖುಷಿ ನಡುವೆ ಸಮಂತಾ, ಹೆಲಿಕ್ಯಾಪ್ಟರ್‌ನಲ್ಲಿ ರಾಜ್ ತೋಳಲ್ಲಿ ಬಂಧಿಯಾಗಿರುವ ಫೋಟೋ ಹಂಚಿಕೊಂಡಿದ್ದಾರೆ. ನಮ್ಮೊಂದಿಗೆ #SUBHAM ವೀಕ್ಷಿಸಿದ್ದಕ್ಕಾಗಿ, ಅನುಭವಿಸಿದ್ದಕ್ಕಾಗಿ ಮತ್ತು ಆಚರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಶುಭಂ ಸಿನಿಮಾ ಬಿಡುಗಡೆಗೂ ಮೊದಲೇ ಸಮಂತಾ ರಾಜ್ ಜೊತೆ ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಭೇಟಿ ನೀಡಿದ್ದರು. ಸಾಂಪ್ರದಾಯಿಕ ಉಡುಗೊರೆಯಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಸಮಂತಾ ಎಲ್ಲೇ ಹೋದರೂ ರಾಜ್ ಕೂಡ ಜೊತೆಯಲ್ಲಿ ಇರುತ್ತಾರೆ. ಹೀಗಾಗಿ ಇಬ್ಬರ ನಡುವೆ ಏನೋ ಇದೆ ಅನ್ನೋ ಸುದ್ದಿ ಇದೆ. ಶೀಘ್ರದಲ್ಲೇ ಸಮಂತಾ ರಾಜ್ ಹಸೆಮಣೆ ಏರುತ್ತಾರೆ ಎನ್ನಲಾಗುತ್ತಿದೆ.