ಕೊಡಗಿನ ಕುವರಿ, ಕನ್ನಡ ಚಿತ್ರರಂಗದ ಚಿಟ್ಟೆ ಅಂತಾಲೇ ಖ್ಯಾತಿ ಪಡೆದಿರುವ ಹರ್ಷಿಕಾ ಪೂಣಚ್ಚ ಈಗ ನಿರ್ದೇಶಕಿಯಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ʼಚಿ.ಸೌಜನ್ಯʼ ಎಂಬ ಕಥೆಯನ್ನು ಪ್ರೇಕ್ಷಕರ ಮುಂದೆ ಹರವಿಡಲು ಹೊರಟಿರುವ ಹರ್ಷಿಕಾ ಈಗ ಹೊಸ ಫೋಟೋಶೂಟ್ ಮೂಲಕ ನೋಡುಗರ ಗಮನಸೆಳೆಯುತ್ತಿದ್ದಾರೆ. ಹರ್ಷಿಕಾ ಪೂಣಚ್ಚ ಸೀರೆಯುಟ್ಟು ಮದನಾರಿಯಾಗಿ ಕಂಗೊಳಿಸುತ್ತಿದ್ದಾರೆ. ನವಿಲುಗರಿ ಹಿಡಿದು ಕ್ಯಾಮೆರಾ ಸ್ಟೈಲ್ ಲುಕ್ ನಲ್ಲಿ ಕಣ್ಣು ಹೊಡೆದಿದ್ದಾರೆ. ಮಗುವಿನ ಹಾರೈಕೆ ಜೊತೆಗೆ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿರುವ ಹರ್ಷಿಕಾಗೆ ಪತಿ ಭುವನ್ ಕೂಡ ಸಾಕಷ್ಟು ಬೆಂಬಲ ಕೊಡುತ್ತಿದ್ದಾರೆ.
ʼಮದನಾರಿʼಯಾಗಿ ಕಂಗೊಳಿಸಿದ ಸ್ಯಾಂಡಲ್ ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ
By Author AIN