ಮೈಸೂರು :- ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನಟಿ ತಮನ್ನಾ ಬಾಟಿಯ ನೇಮಕ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಇದು ಮೈಸೂರು ರಾಜಮನೆತನಕ್ಕೆ ಮಾಡಿದ ಅಪಮಾನವಾಗಿದೆ.
1916ರಲ್ಲಿ ಆರಂಭವಾದ ಕನ್ನಡಿಗರಿಗೋಸ್ಕರ ಆರಂಭವಾದ ಸಂಸ್ಥೆ. ಪರಿಣಿತರು ಆಯ್ಕೆ ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಯಾವ ಪರಿಣಿತರಿಂದ ಈ ನಟಿಯನ್ನು ಆಯ್ಕೆಮಾಡಿದ್ದಾರೆ ತಿಳಿಸಲಿ.
ಮುಂಬೈ ಭಾಗದ ನಟಿ ಆಯ್ಕೆಯ ಹಿಂದೆ ರಾಜ್ಯ ಸಚಿವರ ಕೈವಾಡ ಇದಿಯಾ? ಈ ಸಂಸ್ಥೆ ಕನ್ನಡಿಗನ ಕೂಸು, ಕನ್ನಡಿಗರ ದುರಾದೃಷ್ಟಿಯಿಂದ ನಿರ್ಮಾಣವಾಗಿದೆ. ಕನ್ನಡಿಗರ ತೆರಿಗೆ ಹಣ ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮೈಸೂರಿನಲ್ಲಿ ಬಿ ವೈ ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ.