ದಕ್ಷಿಣ ಆಫ್ರಿಕಾ:– 8 ದಿನದ ಹಸುಗೂಸಿನ ಮೇಲೆ ಪಾಪಿ ತಂದೆ ಓರ್ವ ರೇಪ್ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಜರುಗಿದೆ. ಹ್ಯೂಗೊ ಫೆರೀರಾ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ.
ಹುಷಾರ್ ಜನರೇ| ಕೂಲ್ಕೂಲ್ ಐಸ್ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ- ತಿಂದ್ರೆ ಕ್ಯಾನ್ಸರ್!?
2023ರ ಜೂನ್ನಲ್ಲಿ ಈ ಘಟನೆ ನಡೆದಿತ್ತು, ತನ್ನ ಮನೆಯಲ್ಲಿ ಇನ್ನಷ್ಟೇ ಕಣ್ಣು ಬಿಟ್ಟ ಕಂದಮ್ಮನ ಮೇಲೆ ದೌರ್ಜನ್ಯವೆಸಗಿದ್ದ. ಇದರ ಪರಿಣಾಮವಾಗಿ ತಲೆಗೆ ತೀವ್ರವಾದ ಗಾಯಗಳಾಗಿ ಮಗು ಸಾವನ್ನಪ್ಪಿತ್ತು.
ಸದಾ ಮಕ್ಕಳನ್ನು ಕಾಯುತ್ತಾ ಅವರ ಶ್ರೀರಕ್ಷೆಯಾಗಿ ನಿಂತು ಮುಂಬರುವ ಎಲ್ಲಾ ಕಷ್ಟಗಳನ್ನು ಮಕ್ಕಳಿಗೆ ಬಾರದಂತೆ ತಡೆಯಬೇಕಿದ್ದ ವ್ಯಕ್ತಿಯೇ ದುಷ್ಕೃತ್ಯವೆಸಗಿದ್ದಾರೆ.
ಶಿಶುವಿನ ತಾಯಿ ಮೌರೀನ್ ಬ್ರಾಂಡ್ ಮಾತನಾಡಿ, ಮಗುವನ್ನು ಗಂಡನ ಬಳಿ ಬಿಟ್ಟು ಮಗುವಿಗೆ ಬಟ್ಟೆ ಖರೀದಿಸಲು ಶಾಪ್ಗೆ ಹೋಗಿದ್ದಳು. ಆಕೆ ಮನೆಗೆ ಹಿಂದಿರುಗಿದಾಗ ಮಗು ಮಾರಣಾಂತಿಕ ಗಾಯಗಳಿಂದ ನರಳುತ್ತಿರುವುದನ್ನು ಕಂಡಿದ್ದಾಳೆ. ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗಳಾಗಿದ್ದ ಕಾರಣ ಮಗು ಮೃತಪಟ್ಟಿದೆ ಎಂದಿದ್ದಾರೆ