ಬೆಂಗಳೂರು: ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಇನ್ನೂ ಹೊಸಕೋಟೆ ತಾಲೂಕಿನ ಭೋಧನ ಹೊಸಹಳ್ಳಿ ಗ್ರಾಮದ ಅನಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದು,
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ನಿಮಗೆ ಅನಾರೋಗ್ಯ ಕಾಡುತ್ತೆ..! ಇದನ್ನು ನೀವೂ ನಂಬಲೆಬೇಕು
ಎಸ್ಡಿಎ ಅಧಿಕಾರಿ ಅನಂತ್ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ. ಈಗಾಗಲೇ ಅನಂತ್ ಮನೆಯಲ್ಲೆ ಮೂರು ಲಕ್ಷ ನಗದು ಪತ್ತೆಯಾಗಿದ್ದು, ಜೊತೆಗೆ 11 ಚಿನ್ನದ ಉಂಗುರ, ಎರಡು ಬ್ರಾಸ್ ಲೈಟ್, ಎರಡು ಕೆಜಿಗೂ ಅಧಿಕ ಬೆಳ್ಳಿ ಸಮಾನುಗಳು ಪತ್ತೆಯಾಗಿದೆ.
ಹೊಸಕೋಟೆ ತಾಲೂಕು ಕಚೇರಿಯ ಭೂ ಮಂಜೂರಾತಿ ಸೆಕ್ಷನ್ ನಲ್ಲಿ ಅನಂತ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಧಾಯಕ್ಕಿಂತ ಹೆಚ್ಚು ಆಸ್ತಿಹೊಂದಿರೋ ಆರೋಪದ ಹಿನ್ನಲೆ ಅನಂತ್ ಮನೆ ಮೇಲೆ ರೈಡ್ ಮಾಡಲಾಗಿದೆ.