ಬಾಗಲಕೋಟೆ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ಎಂದು ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಬೇಹುಗಾರಿಕೆ ಪೆಲ್ಯೂರ್ ಆಗ್ತಿರೋದು ಇದೇ ಮೊದಲಲ್ಲ. ಕಾರ್ಗಿಲ್ ಯುದ್ದ ಆದಾಗ,ಪುಲ್ವಾಮಾದಲ್ಲಿ ಫೇಲ್ ಆಯ್ತು ಮತ್ತೆ ಇವಾಗ ಫೇಲ್ ಆಗಿದೆ. ಇದನ್ನು ಕೇಳಿದರೆ ಹಿಂದು ಐಡಿ ಕಾರ್ಡ್ ನೋಡಿದರೂ ಗುಂಡು ಹೊಡೆದರು ಅಂತ ಹೇಳ್ತಾರೆ. ಮುಸ್ಲಿಂರನ್ನು ಕೊಂದಿಲ್ವಾ ಅವರು. ಯಾರೆ ಸತ್ತರೂ ಅದನ್ನು ರಾಜಕೀಯವಾಗಿ ಹೇಗೆ ಲಾಭ ತಗೊಬೇಕು ಅನ್ನೋದೆ ನಮ್ಮ ಧ್ಯೇಯ ಆದರೆ. ದೇಶದ ಪರಿಸ್ಥಿತಿ ಎಲ್ಲಿಗೆ ಹೋಗಬೇಕು ಎಂದರು. ಚುನಾವಣೆ ಬಂದಾಗ ಕಾರವಾರದಲ್ಲಿ ಯಾರೋ ಸತ್ತರೆ ಮುಸ್ಲಿಂರೆ ಕೊಂದ್ರು ಅಂದ್ರು. ಆನಂತರ ಅಸಹಜ ಸಾವು ಅಂತ ಬಂತು. ಎಲ್ಲವನ್ನೂ ಎಲೆಕ್ಷನ್ ದೃಷ್ಟಿಯಿಂದ ನೋಡಿಕೊಂಡರೆ ಇದು ಸರಿನಾ? ಎಂದು ಪ್ರಶ್ನಿಸಿದರು.
ಕಲಬುರಗಿಯಲ್ಲಿ ಮಹಿಳೆಯರಿಂದ ಪಾಕ್ ಧ್ವಜ ರಕ್ಷಣೆ ವಿಚಾರವಾಗಿ ಮಾತನಾಡಿ, ರಸ್ತೆ ಮೇಲೆ ಅಂಟಿಸಿದ ಪಾಕ್ ಧ್ವಜ ರಕ್ಷಣೆ ಮಾಡಿದವರು ಯಾರಾಗಿದಾರೆ. ಅವರನ್ನು ಅರೆಸ್ಟ್ ಮಾಡುತ್ತೇವೆ. ಇವರನ್ನು ಅರೆಸ್ಟ್ ಮಾಡಲೇಬೇಕಲ್ವಾ ಮಾಡುತ್ತೇವೆ. ಯಾಕೆ ಮಾಡೋದಿಲ್ಲ. ರಾಷ್ಟ್ರದ್ರೋಹಿಗಳ್ಯಾರಿದ್ದಾರೋ ಅವರಿಗೆಲ್ಲ ಶಿಕ್ಷೆ ಆಗಬೇಕು ಎಂದರು.