ಬೆಂಡೆಕಾಯಿ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿದೆ. ಇದನ್ನು ನಮ್ಮ ದೇಶದಲ್ಲಿ ಹಲವು ಬಗೆಯ ಅಡುಗೆಗಳಲ್ಲಿ ಬಳಸುತ್ತಾರೆ. ತಿನ್ನಲು ರುಚಿಯಾಗಿರುತ್ತದೆ. ಬೆಂಡೆಕಾಯಿಯಲ್ಲಿರುವ ಪೆಕ್ಟಿನ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಬೆಂಡೆಕಾಯಿಯಲ್ಲಿ ಫೋಲೇಟ್ ಮತ್ತು ವಿಟಮಿನ್ ಬಿ9 ನಂತಹ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ಮೆದುಳು ತನ್ನ ಕೆಲಸವನ್ನು ಸರಿಯಾಗಿ ಮಾಡಲು ತುಂಬಾ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಬೆಂಡೆಕಾಯಿ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ನಿಮಗೆ ಅನಾರೋಗ್ಯ ಕಾಡುತ್ತೆ..! ಇದನ್ನು ನೀವೂ ನಂಬಲೆಬೇಕು
ಅಷ್ಟೇ ಅಲ್ಲ, ಅಯುರ್ವೇದವೂ ಸಕ್ಕರೆಯನ್ನು ನಿಯಂತ್ರಿಸಲು ಬೆಂಡೆಕಾಯಿ ಸೇವಿಸುವಂತೆ ಸಲಹೆ ಮಾಡಿದೆ. ಬೆಂಡೆಕಾಯಿಯಲ್ಲಿ ಅವಶ್ಯಕ ಪೋಷಕಾಂಶಗಳ ಜೊತೆಗೇ ವಿಟಮಿನ್ನುಗಳು, ಖನಿಜಗಳು ಮತ್ತು ಕರಗದ ಮತ್ತು ಕರಗುವ ನಾರಿನಂಶಗಳು ಇವೆ. ಅಲ್ಲದೇ ಪ್ರತಿ ನೂರು ಗ್ರಾಂನಲ್ಲಿ ಕೇವಲ 33ಕಿಲೋಕ್ಯಾಲೊರಿಗಳಿವೆ.
ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿ
ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು ಹಾಗೂ ಕರಗುವ ಮತ್ತು ಕರಗದ ನಾರಿನಂಶಗಳು ಆಹಾರದ ಸಕ್ಕರೆಯನ್ನು ಅತಿ ನಿಧಾನವಾಗಿ ರಕ್ತದಲ್ಲಿ ಬೆರೆಯುವಂತೆ ಮಾಡುತ್ತವೆ. ಅಲ್ಲದೇ ಆಹಾರದಲ್ಲಿರುವ ಕಾರ್ಬೋಹೈಡ್ರೇಟುಗಳು ಅತಿ ನಿಧಾನವಾಗಿ ಜೀರ್ಣಗೊಳ್ಳುತ್ತವೆ. ಇವೆರಡೂ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಹ ಗುಣಗಳಾಗಿವೆ. ತನ್ಮೂಲಕ ಊಟವಾದ ತಕ್ಷಣ ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರುವುದು, ಊಟವಾದ ಕೊಂಚ ಹೊತ್ತಿಗೇ ಮತ್ತೊಮ್ಮೆ ಹಸಿವಾಗುವುದು ಮೊದಲಾದ ಕಳ್ಳಾಟಗಳೆಲ್ಲಾ ಬೆಂಡೆಕಾಯಿ ಬಂದ ಬಳಿಕ ಮೂಲೆ ಸೇರುತ್ತವೆ.
ಬೆಂಡೆಯಲ್ಲಿವೆ ಉತ್ತಮ ಪೋಷಕಾಂಶಗಳು
ಬೆಂಡೆಕಾಯಿಯಲ್ಲಿ ಫ್ಲೇವನಾಯ್ಡುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ ಹಾಗೂ ಇವು ಸಕ್ಕರೆಯ ನಿಯಂತ್ರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತವೆ. ಇದರಲ್ಲಿ ಅತಿ ಸಾಮಾನ್ಯವಾದ ಸಂಯುಕ್ತವೆಂದರೆ ಮೈರಿಸೆಟಿನ್. ಇದು ಸಕ್ಕರೆಯನ್ನು ನಿಯಂತ್ರಿಸುವ ಜೊತೆಗೇ ಇತರ ಸಾಂಕ್ರಾಮಿಕವಲ್ಲದ ರೋಗಗಳಾದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಕೊಲೆಸ್ಟ್ರಾಲ್ ಮೊದಲಾದವುಗಳನ್ನು ನಿಗ್ರಹಿಸುತ್ತದೆ. ಇದರ ಹೊರತಾಗಿ ಓಲಿಯಾನೋಲಿಕ್ ಆಮ್ಲ, ಬೀಟಾ ಸಿಸ್ಟೋಸ್ಟೆನಾಲ್, ಮತ್ತು ಕೇಯಂಫೆರಾಲ್ ಎಂಬ ಆಂಟಿ ಆಕ್ಸಿಡೆಂಟುಗಳೂ ಹೆಚ್ಚಿನ ಬೆಂಬಲ ನೀಡುತ್ತವೆ.
ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಗುಣ ಹೊಂದಿರುವ ‘ರಾಮ್ನೋಗ್ಯಾಲಾಕ್ಟುರೊನನ್’ ಎಂಬ ಹೆಸರಿನ ಇನ್ನೊಂದು ಸಂಯುಕ್ತ ಕಾರ್ಬೋಹೈಡ್ರೇಟು ಸಹಾ ಬೆಂಡೆಕಾಯಿಯಲ್ಲಿ ಇರುವುದನ್ನು ಗಮನಿಸಲಾಗಿದೆ.
ಮಧುಮೇಹಿಗಳು ಬೆಂಡೆಕಾಯಿಯನ್ನು ಸೇವಿಸುವ ವಿಧಾನ
ಅಧ್ಯಯನಗಳಿಂದ ಕಂಡುಕೊಂಡ ಪ್ರಕಾರ, ಮಧುಮೇಹಿಗಳು ಕನಿಷ್ಟ ವಾರದಲ್ಲಿ ಮೂರು ಹೊತ್ತಿನ ಊಟದಲ್ಲಿಯಾದರೂ ಬೆಂಡೆಕಾಯಿಯನ್ನು ಸೇವಿಸಬೇಕು.