ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದ ಸುಲ್ತಾನ್ ಬತ್ತೇರಿ ಮಾರ್ಗವಾಗಿಸಂಚರಿಸುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದೊಳಗೆ ಆಹಾರ ಅರಸಿ ನಿಂತಿದೆ. ಈ ವೇಳೆ ಆನೆ ಮುಂದೆ ಸೆಲ್ಪಿ ವಿಡಿಯೋ ತೆಗೆಯಲು ಕೇರಳದ ವಾಹನ ಸವಾರನೊಬ್ಬ ಆನೆ ಮುಂದೆ ಸಾಗಿದ್ದಾನೆ. ಮೊಬೈಲ್ ಬೆಳಕನ್ನು ಆನೆ ಮುಂದೆ ಬಿಟ್ಟು ಕಿರಿಕ್ ಮಾಡಿ ಸೆಲ್ಪಿ ಫೋಟೋಗೆ ಮುಂದಾಗಿದ್ದಾನೆ.
ಆ ವೇಳೆ ಆನೆ ಘರ್ಜಿಸಿ ದಾಳಿಗೆ ಮುಂದಾಗಿದೆ. ಎದ್ದು ಬಿದ್ದು ಓಡಿಬಂದ ಕೇರಳಿಗ ಸ್ಕೂಟರ್ ಕಿಕ್ ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಘಟನೆ ಕಂಡ ಕೇರಳ ಪ್ರವಾಸಿಗರು ನಿನಗೆ ತಲೆ ಕೆಟ್ಟಿದೆಯಾ ಆನೆ ಮುಂದೆ ಸೆಲ್ಪಿ ತೆಗೆಯೋಕೆ ಹೋಗಿದಿಯಲ್ಲ, ಬುದ್ದಿ ಇದಿಯಾ ನಿಂಗೆ ಅಂತ ಕ್ಯಾಕರಿಸಿ ಬೈದಿದ್ದಾರೆ.
ಹಾಸನದಲ್ಲಿ ಗಾಳಿಮಳೆ ; ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ಕೆಎಸ್ಆರ್ಟಿಸಿ ನೌಕರ ಸಾವು
ಅರಣ್ಯ ಇಲಾಖೆಯವರು ಅರಣ್ಯದೊಳಗೆ ಪ್ರಾಣಿಗಳ ವಾಹನ ನಿಲ್ಲಿಸಬೇಡಿ ಎಂದು ಅನೇಕ ಬಾರಿ ಎಚ್ಚರಿ ಹಾಗೂ ಅರಿವು ಮೂಡಿಸಿದರೂ ಕೂಡ ವಾಹನ ಸವಾರರು ತಮ್ಮ ಹುಚ್ಚಾಟ ಮಾತ್ರ ಬಿಡ್ತಾನೇ ಇಲ್ಲ ಅಚ್ಟಕ್ಕೂ ಪ್ರಾಣಿಗಳ ಮುಂದೆ ಹುಚ್ಚಾಟ ಮಾಡೋವರು ವಿದ್ಯಾವಂತರೇ ಆಗಿರುತ್ತಾರೆ. ಇವರಿಗೆ ಹೇಗೆ ಬುದ್ದಿ ಹೇಳಬೇಕೋ ಎನ್ನುತ್ತಾರೆ ಪರಿಸರ ಪ್ರಿಯರು.