ಸೀತಾ ವಲ್ಲಭ ಧಾರಾವಾಹಿಯಲ್ಲಿ ಖ್ಯಾತಿಯ ನಟಿ ಸುಪ್ರೀತಾ ನಾರಾಯಣ್ ಹೊಸ ಬಾಳಿಗೆ ಹೆಜ್ಜೆ ಇಡಲು ರೆಡಿಯಾಗಿದ್ದಾರೆ. ಅದರ ಮೊದಲ ಭಾಗವೆಂಬಂತೆ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಸೀಕ್ರೆಟ್ ಆಗಿ ಉಂಗುರ ಬದಲಿಸಿಕೊಂಡಿದ್ದಾರೆ. ಡಿಜಿಟಲ್ ಕ್ರಿಯೇಟರ್ ಚಂದನ್ ಶೆಟ್ಟಿ ಎಂಬುವರ ಜೊತೆ ಸುಪ್ರಿತಾ ಸಪ್ತಪದಿ ತುಳಿಯಲು ಅಣಿಯಾಗಿದ್ದಾರೆ. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿದ್ದಾರಾ? ಅನ್ನೋದು ರಿವೀಲ್ ಆಗಿಲ್ಲ.
ಕನ್ನಡದ ಸೀತಾ ವಲ್ಲಭ ಧಾರಾವಾಹಿಯ ಮೈಥಿಲಿ ಪಾತ್ರ ಮೂಲಕ ಮನೆಮಾತಾದವರು ಸುಪ್ರೀತಾ ನಾರಾಯಣ. ಸಾವಿತ್ರಮ್ಮಗಾರಿ ಅಬ್ಬಾಯಿ ಎಂಬ ತೆಲುಗು ಸೀರಿಯಲ್ ನಲ್ಲಿಯೂ ಅಭಿನಯಿಸಿದ್ದಾರೆ. ಅಲ್ಲದೇ ಒಂದಷ್ಟು ಚಿತ್ರದಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. ಮೂಲತಃ ಮೈಸೂರಿನವರಾದ ಸುಪ್ರೀತಾ ಚಂದನ್ ಯಾವಾಗ ವರಿಸಲಿದ್ದಾರೆ ಅನ್ನೋದನ್ನು ಹೇಳಿಕೊಂಡಿಲ್ಲ.