ಬೆಂಗಳೂರು:- ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಮಾಡಲಾಗಿತ್ತು.
ಇದೀಗ ವಿಧಾನ ಸಭೆಯಿಂದ ಅಮಾನತ್ತುಗೊಂಡ ಶಾಸಕರು ಇಂದು ಪ್ರತ್ಯೇಕ ಸಭೆ ನಡೆಸಿದ್ದಾರೆ. ವಿಧಾನಸಭೆ ಕಾರ್ಯ ಕಲಾಪಕ್ಕೆ ಅಡ್ಡಿ, ಅಶಿಸ್ತು ಹಿನ್ನಲೆ ಅಮಾನತ್ತಾಗಿದ್ದ ಬಿಜೆಪಿಯ 18 ಶಾಸಕರು ಖಾಸಗಿ ಹೋಟೆಲ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ
ವಿಪಕ್ಷ ಬಿಜೆಪಿಯ ಮುಖ್ಯ ಸಚೇತನ ದೊಡ್ಡನಗೌಡ ಪಾಟೀಲ್ ಕರೆದ ಸಭೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ್ ನೇತೃತ್ವ ವಹಿಸಿದ್ದರು. ಅಮಾನತ್ತು ಆದೇಶ ಮರು ಪರಿಶೀಲಿಸುವಂತೆ ಸ್ಪೀಕರ್ ಗೆ ಮನವಿ ಮಾಡುವುದು ಸೇರಿದಂತೆ.. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳು, ಜನರ ಅಹವಾಲು ಆಲಿಸಲು, ಅಧಿಕಾರಿಗಳ ಸಭೆ ನಡೆಸುವುದರ ಬಗ್ಗೆ ಸ್ಪೀಕರ್ ಗೆ ಮನವಿ ಸಲ್ಲಿಸುವುದರ ಬಗ್ಗೆ ಚರ್ಚೆ ನಡೆದಿದೆ.
ಅಮಾನತುಗೊಂಡ 18 ಶಾಸಕರು:-
ದೊಡ್ಡನಗೌಡ ಹೆಚ್.ಪಾಟೀಲ್, ಡಾ.ಅಶ್ವಥ್ ನಾರಾಯಣ್ ಸಿ.ಎನ್. ಎಸ್.ಅರ್.ವಿಶ್ವನಾಥ್, ಬಿ.ಎ.ಬಸವರಾಜ, ಎಂ.ಅರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಸಿ.ಕೆ.ರಾಮಮೂರ್ತಿ, ಯಶ್ ಪಾಲ್ ಎ.ಸುವರ್ಣ, ಬಿ.ಪಿ ಹರೀಶ್,ಡಾ.ಭರತ್ ಶೆಟ್ಟಿ ವೈ,ಮುನಿರತ್ನ, ಬಸವರಾಜ್ ಮತ್ತಿಮಡು,ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ…