ಬೆಂಗಳೂರು:- ಬೆಂಗಳೂರಿನ ಮೆಯೋಹಾಲ್ ಜಂಕ್ಷನ್ನಲ್ಲಿ ಸಂಭವಿಸಿದ್ದ ಸರಣಿ ಅಪಘಾತದಲ್ಲಿ 36 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
ಕಾಲ್ತುಳಿತ ಕೇಸ್: ಸರ್ಕಾರದ ವಿರುದ್ಧ ಹಲವು ಆರೋಪ..ಇಂದು ಹೈಕೋರ್ಟ್ ನಲ್ಲಿ ವಿಚಾರಣೆ
36 ವರ್ಷದ ಅಂಜಲಿ ಮೃತ ಮಹಿಳೆ.ಜಂಕ್ಷನ್ನಲ್ಲಿ ನಿಂತಿದ್ದ ಕಾರಿಗೆ ಗೂಡ್ಸ್ ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಮುಂದೆ ಇದ್ದೆ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಲ್ಲಿದ್ದ ವಿಜಯ್ ಕುಮಾರ್ ಹಾಗೂ ಅಂಜಲಿ ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿ ಅಂಜಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ವಿಜಯ್ ಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣನಾಗಿರುವ ಗೂಡ್ಸ್ ವಾಹನದ ಚಾಲಕ ಘಟನೆ ಬಳಿಕ ತಲೆಮರಿಸಿಕೊಂಡಿದ್ದಾನೆ. ಘಟನೆ ಸಂಬಂಧ ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.