ಬೆಂಗಳೂರು:- ಸರಣಿ ಅಪಘಾತ ಸಂಭವಿಸಿ 4 ಕಾರುಗಳು ಜಖಂಗೊಂಡ ಘಟನೆ ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಜರುಗಿದೆ.
ನಾನು ಭಾರತೀಯಳೇ, ಆದ್ರೆ ಭಾರತವನ್ನು ಧ್ವೇಷಿಸುತ್ತೇನೆ: ಹಿಂದುಗಳನ್ನು ಕೆರಳಿಸಿದ ವೈದ್ಯೆ ಪೋಸ್ಟ್!
ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆಯಲ್ಲಿ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಸರಣಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ 4 ಕಾರುಗಳು ಜಖಂಗೊಂಡಿದ್ದು, ಕೆಲವರು ಗಾಯಗೊಂಡಿದ್ದಾರೆ. ಅತಿ ವೇಗವಾಗಿ ಬರುತ್ತಿದ್ದ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.