ಕೋಲಾರ:- ಖ್ಯಾತ ನಿರ್ದೇಶಕ ನಂದ ಕಿಶೋರ್ ವಿರುದ್ಧ ಕೋಲಾರ ಮೂಲದ ಯುವ ನಟರೊಬ್ಬರು ಹಣಕಾಸು ವಂಚನೆ ಆರೋಪ ಮಾಡಿದ್ದಾರೆ. ನಿರ್ದೇಶಕ ನಂದ ಕಿಶೋರ್, ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುದೀಪ್ ಹೆಸರು ಹೇಳಿ ಖ್ಯಾತ ನಿರ್ದೇಶಕ ನಂದಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ. 9 ವರ್ಷಗಳ ಹಿಂದೆ ನಂದ ಕಿಶೋರ್ ನನ್ನಿಂದ 22 ಲಕ್ಷ ರೂ. ಪಡೆದು ಈಗ ಹಣ ನೀಡದೇ ವಂಚಿಸಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.
ಮಡಿಕೇರಿ: ಓವರ್ ಟೇಕ್ ಮಾಡುವ ಬರದಲ್ಲಿ ಬೈಕ್ ಗೆ ಕಾರು ಡಿಕ್ಕಿ; ಸವಾರ ಗಂಭೀರ!
9 ವರ್ಷಗಳ ಹಿಂದೆ ನಂದಕಿಶೋರ್ 22 ಲಕ್ಷ ರೂ. ಪಡೆದಿದ್ದರು. ದುಡ್ಡು ಕೊಡುವಂತೆ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್ ನೀಡಿದ್ದರು. ಆದರೆ ನನಗೆ ಯಾವುದೇ ಆಫರ್ ನೀಡಿರಲಿಲ್ಲ.ಈ ವಿಚಾರವನ್ನು ನಾನು ನಟ ಸುದೀಪ್ ಅವರ ಗಮನಕ್ಕೆ ತರಲು ಮುಂದಾಗಿದ್ದೆ. ಈ ವೇಳೆ ಸುದೀಪ್ ಬಳಿ ಹೇಳದಂತೆ ತಡೆಯುತ್ತಿದ್ದರು. ನಾನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆಡುವ ಕನಸ್ಸು ಕಟ್ಟಿಕೊಂಡಿದ್ದೆ. ಕನ್ನಡ ಚಲನಚಿತ್ರ ಕಪ್ಟೂ ರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನನ್ನು ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ
ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಎನ್ನುತ್ತಿದ್ದಾರೆ. ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಹಣ ನನಗೆ ಕೊಡದಿದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೇನೆ. ಫಿಲ್ಮ್ ಚೇಂಬರ್ಗೆ ದೂರು ಕೊಡುತ್ತೇನೆ ಎಂದಿದ್ದಾರೆ.