ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡನೂರು ಮನು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕಾಮಿಡಿ ಕಿಲಾಡಿ ಸೀಸನ್ 2 ವಿನ್ನರ್ ಆಗಿದ್ದ ಮಡೆನೂರು ಮನು ಈಗ ನಾಯಕನಾಗಿಯೂ ಮಿಂಚಿದ್ದಾರೆ. ನಾಳೆ ಅವರು ನಟಿಸಿರುವ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಮಡೆನೂರು ಮನು ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.
ಮಡೆನೂರು ಮನು ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಸಹ ಸಹನಟಿ ಮನು ಮೇಲೆ ಗಂಭೀರ ಆರೋಪ ಮಾಡಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಏನಿದೆ?
ಈ ದಿನ 12-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಂಕ್ಷಿಪ್ತ ಸಾರಾಂಶವೇಂದರೆ, ನಾನು ಈ ಹಿಂದೆ ನಂ. 57/18, ಚೌಡೇಶ್ವರಿ ನಿಲಯ, 5ನೇ ಕ್ರಾಸ್, ಬನಶಂಕರಿ 3ನೇ ಹಂತ, ಕಾಮಾಕ್ಯ ಬೆಂಗಳೂರು ಇಲಿ, ಸುಮಾರು 5 ವರ್ಷಗಳ ಕಾಲ ವಾಸವಾಗಿದ್ದೇನು ಸದರಿ ನಾಗರಭಾವಿ ಬಾಡಿಗೆ ಮನೆಯನ್ನು ಮಡೆನೂರು ಮನು ರವರೇ ಹುಡುಕಿ ಮಾಡಿಕೊಟ್ಟಿರುತ್ತಾರೆ. 2018ನೇ ಸಾಲಿನಲ್ಲಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಮಡೆನೂರು ಮನು ಎಂಬುವರು ನನಗೆ ಪರಿಚಯ ಆಗಿ ಇಬ್ಬರು ಸ್ನೇಹಿತರಾಗಿರುತ್ತೇವೆ. ಸದರಿ ಮಡೆನೂರು ಮನು ಈತನು ಈಗಾಗಲೇ ದಿವ್ಯಾ ಎಂಬುವರನ್ನು ಮದುವೆ ಆಗಿ ಅವರಿಗೆ ಒಂದು ಹೆಣ್ಣು ಮಗು ಇರುತ್ತೆ. ದಿನಾಂಕ:-29-11-2022 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ, ಒಂದು ಕಾರ್ಯಕ್ರಮ ಇದ್ದು, ಸದರಿ ಕಾರ್ಯಕ್ರಮಕ್ಕೆ ನನ್ನನ್ನು ಹಾಗೂ ಇತರೆ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿ ಅಲಿ. ಒಂದು ಹಾಸು ಕಾರ್ಯಕ್ರಮ ಮಾಡಿರುತ್ತಾನೆ. ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಶಿಕಾರಿಪುರದ ಹೋಟೆಲ್ ರೂಮಿನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ನನ್ನ ಮೇಲೆ ಆತ್ಮಾಚಾರ ಮಾಡಿರುತ್ತಾನೆ. ಇದಾದ ಮೇಲೆ 2022ನೇ ಸಾಲಿನ ಡಿಸೆಂಬರ್ ಮಾಹೆಯ 3ನೇ ರಂದು ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿರುತ್ತಾನೆ. ನಂತರ ಅದೇ ಮನೆಯಲ್ಲಿ ಮನು ನನ್ನ ಮೇಲೆ ಹಲವಾರು ಬಾರಿ ಆತ್ಮಾಚಾರ ಮಾಡಿರುತ್ತಾನೆ. ಈ ನಡುವೆ ನಾನು ಪ್ರೆಗ್ನೆಂಟ್ ಆಗಿದ್ದು, ಇದನ್ನು ತಿಳಿದ ಮನು ಮನೆಗೆ ಬಂದು ನನಗೆ ಗರ್ಭಪಾತ ಆಗುವ ಮಾತ್ರೆ ನೀಡಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೆ ಮತ್ತೆ ನಾನು ಪ್ರೆಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ. ನಂತರ ಮನು ರವರು ನನಗೆ ಈ ಮೇಲ್ಕಂಡ ಮನೆಯನ್ನು ಬಾಡಿಗೆಗೆ ಮಾಡಿ ಈ ಮನೆಯಲ್ಲಿಯೂ ಸಹ ನನ್ನ ಮೇಲೆ ಅತ್ಯಾಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಆತನ ಪೋನ್ನಲಿ ರೆಕಾರ್ಡ್ ಮಾಡಿಕೊಂಡು ನನಗೆ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿರುತ್ತಾನೆ. ಆತನು ಒಂದು ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು ಇದಕ್ಕೆ ನಾನು ಸುಮಾರು ಲಕ್ಷಾಂತರ ರೂಪಾಯಿಗಳನ್ನು ಮನುಗೆ ನೀಡಿರುತ್ತೇನೆ. ಆದ್ದರಿಂದ ಈ ರೀತಿ ನನ್ನ ಮೇಲೆ ಆತಾಚಾರ ಮಾಡಿ, ಮದುವೆ ಮಾಡಿಕೊಂಡಂತೆ ನಾಟಕ ಮಾಡಿ ನನಗೆ ಗರ್ಭಪಾತ ಮಾಡಿಸಿ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದು, ಇದನ್ನು ಕೇಳಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿರುವ ಮಡೆನೂರು ಮನು ರವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರು ಇತ್ಯಾದಿ.
ಪ್ರಕರಣ ದಾಖಲಾಗುತ್ತಿದ್ದಂತೆ ಮನು ಎಸ್ಕೇಪ್ ಆಗಿದ್ದು. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಹುಡಕಾಟ ಶುರು ಮಾಡಿದ್ದಾರೆ.