ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಆರ್ಸಿಬಿ ಕೊನೆಯ ಬಾರಿಗೆ ಫೈನಲ್ ಆಡಿದ್ದು 2016ರಲ್ಲಿ. ಆ ಪಂದ್ಯ ನಮ್ಮದೇ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ, ಅಂದು ಕಪ್ ಗೆಲ್ಲುವ ಕನಸು ಕೇವಲ ಬೆರಳಿನ ಅಂತರದಲ್ಲಿ ನುಚ್ಚುನೂರಾಗಿತ್ತು. ಆ ಕಹಿ ನೆನಪನ್ನು ಮರೆತು, ಈ ಬಾರಿ ಕಪ್ ಗೆಲ್ಲುವ ಭರವಸೆಯಲ್ಲಿ ಆರ್ಸಿಬಿ ತಂಡ ಈಗ ಅಹಮದಾಬಾದ್ಗೆ ಆಗಮಿಸಿದೆ. ಜೂನ್ 3 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ತಂಡ ಭರ್ಜರಿ ತಯಾರಿ ನಡೆಸುತ್ತಿದೆ.
ಟಿಮ್ ಡೇವಿಡ್ ಫಿಟ್ ಆಗ್ತಾರಾ? ಆರ್ಸಿಬಿ ಕ್ಯಾಂಪ್ನಲ್ಲಿ ಈಗ ಸಂಪೂರ್ಣ ಧನಾತ್ಮಕ ವಾತಾವರಣವಿದೆ. ಆಟಗಾರರಲ್ಲಿ ಭರವಸೆ, ಉತ್ಸಾಹ ಮುಗಿಲು ಮುಟ್ಟಿದೆ. ಇಡೀ ತಂಡವೇ ಒಂದಾಗಿ, ‘ಈ ಸಲ ಕಪ್ ನಮ್ದೇ’ ಎಂಬ ಧ್ಯೇಯದೊಂದಿಗೆ ಮುನ್ನುಗ್ಗುತ್ತಿದೆ. ಅಹಮದಾಬಾದ್ ತಲುಪಿರುವ ಆರ್ಸಿಬಿ, ಫೈನಲ್ಗೆ ಬೇಕಾದ ಎಲ್ಲಾ
ತಂತ್ರಗಳನ್ನು ರೂಪಿಸುತ್ತಿದೆ.
ಆದರೆ, ತಂಡದ ಆಲ್ರೌಂಡರ್ ಟಿಮ್ ಡೇವಿಡ್ ಫೈನಲ್ನಲ್ಲಿ ಆಡಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ ಎಂಬುದು ಸದ್ಯಕ್ಕಿರುವ ದೊಡ್ಡ ಪ್ರಶ್ನೆ. ಡೇವಿಡ್ ಅವರ ಫಿಟ್ನೆಸ್ ಕುರಿತು ತಂಡದ ಮ್ಯಾನೇಜ್ಮೆಂಟ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಅವರು ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಸೇರಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟಿಮ್ ಡೇವಿಡ್ ಅವರ ಉಪಸ್ಥಿತಿ ತಂಡಕ್ಕೆ ಮತ್ತಷ್ಟು ಬಲ ನೀಡಲಿದೆ. ಆದರೆ ಮೂಲಗಳ ಪ್ರಕಾರ ನಾಳೆ ಅವರು ಆಡೋದು ಡೌಟ್ ಅಂತ ಹೇಳಲಾಗ್ತಿದೆ.
ಪ್ರತಿ ಐಪಿಎಲ್ ಆವೃತ್ತಿಯಲ್ಲೂ ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಯೊಂದಿಗೆ ಆರ್ಸಿಬಿ ತಂಡವನ್ನು ಬೆಂಬಲಿಸುವ ಕೋಟಿಗಟ್ಟಲೆ ಅಭಿಮಾನಿಗಳಿಗೆ ಈ ಬಾರಿಯ ಫೈನಲ್ ವಿಶೇಷವಾಗಿದೆ.