ಬೆಂಗಳೂರು: ಹೌದು, ಕರ್ನಾಟಕದ ಜನತೆಗೆ ಇಂದು ಒಂದೇ ದಿನ ರಾಜ್ಯ ಸರ್ಕಾರ ಡಬಲ್ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಮಧ್ಯಾಹ್ನ ನಂದಿನಿ ಹಾಲಿನ ದರವನ್ನು 4ರೂ. ಹೆಚ್ಚಳ ಮಾಡಿದ್ದ ಸರ್ಕಾರಮ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಿದೆ.
ಇದೀಗ ಸಂಜೆ 5 ಗಂಟೆ ಹೊತ್ತಿಗೆ ಕರೆಂಟ್ ಶಾಕ್ ನೀಡಿದೆ. ಐದು ಗ್ಯಾರಂಟಿ ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಇದೀಗ ರಾಜ್ಯದ ಜನರಿಗೆ ಕರೆಂಟ್ ಶಾಕ್ ಗ್ಯಾರಂಟಿ ನೀಡಿದೆ. ಅದು ಏನಂತೀರ ಅಂದರೆ, ಏಪ್ರಿಲ್ 1ರಿಂದಲೇ ರಾಜ್ಯದಲ್ಲಿ ವಿದ್ಯುತ್ ದರವೂ ಏರಿಕೆಯಾಗಲಿದೆ.
ಹೌದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಏಪ್ರಿಲ್ 1ರಿಂದ ಪ್ರತಿ ಯೂನಿಟ್ ವಿದ್ಯುತ್ ದರವನ್ನು 36 ಪೈಸೆಯಷ್ಟು ಹೆಚ್ಚಳ ಮಾಡಿದೆ.
ಇಷ್ಟೇ ಅಲ್ಲ, ಮುಂದಿನ 3 ವರ್ಷಕ್ಕೂ ವಿದ್ಯುತ್ ದರವನ್ನು ಈಗಲೇ ಏರಿಕೆ ಮಾಡಿ ಆದೇಶ ಹೊರಡಿಸಿದೆ.
2025-26ರಲ್ಲಿ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ
2026-27ಕ್ಕೆ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳ
2027-28ಕ್ಕೆ ಪ್ರತಿ ಯೂನಿಟ್ ದರ 34 ಪೈಸೆ ಹೆಚ್ಚಳ
ಮಧ್ಯಾಹ್ನವಷ್ಟೇ ನಂದಿನಿ ಹಾಲಿನ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ಕೊಟ್ಟಿದ್ದ ರಾಜ್ಯ ಸರ್ಕಾರ ಮತ್ತೆ ಕರೆಂಟ್ ಶಾಕ್ ನೀಡಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್, ಮೆಟ್ರೋ ಪ್ರಯಾಣ ದರ ದುಬಾರಿಯಾದ ಬೆನ್ನಲ್ಲೇ ಮತ್ತೆರಡು ಶಾಕ್ ನೀಡಿ ಯುಗಾದಿ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ.