ಬೆಂಗಳೂರು: ಜುಲೈ 5ರ ಮಧ್ಯಾಹ್ನ, ಬೆಂಗಳೂರಿನ ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಭೀಕರ ಅಪಘಾತ ನಡೆದಿದೆ. ಬೈಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ಹೋಗುತ್ತಿದ್ದ ಟೆಂಪೊ, ಡಿವೈಡರ್ಗೆ ಡಿಕ್ಕಿಯಾಗಿ ಎರಡೂ ತುಂಡಾಗಿದೆ.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಕಂಪನಿ ಬೆಡ್ ಶೀಟ್, ಬಟ್ಟೆ ತುಂಬಿದ್ದ ಟೆಂಪೊ, ಡಿಕ್ಕಿಯ ರಭಸಕ್ಕೆ ಒಂದು ಭಾಗ ಬ್ರಿಡ್ಜ್ ಮೇಲೆಯೇ, ಮತ್ತೊಂದು ಭಾಗ ಬ್ರಿಡ್ಜ್ ಕೆಳಗೆ ಬಿದ್ದು ಬಿಟ್ಟಿದೆ. ಡ್ರೈವರ್ ಸೀಟ್ ನಿಂದ ನೆಲಕ್ಕೆ ಬಿದ್ದ ಚಾಲಕ ರಾಘವೇಂದ್ರ (35) ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೆಂಪೋದಲ್ಲಿದ್ದ ಸಲೀಂ ಮತ್ತು ಫಜಾಯ್ ಎಂಬ ಇಬ್ಬರು ಸಹ ಪ್ರಯಾಣಿಕರಿಗೆ ಗಾಯವಾಗಿದೆ. ಅದೃಷ್ಟವಶಾತ್ ಮೂವರಿಗೂ ಪ್ರಾಣಾಪಾಯ ತಪ್ಪಿದ್ದು, ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಸಂಬಂಧ ಅದೃಷ್ಟವಶಾತ್ ಮೂವರಿಗೂ ಪ್ರಾಣಾಪಾಯ ತಪ್ಪಿದ್ದು, ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.