ಬೆಂಗಳೂರು/ರಾಮನಗರ:- ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಪ್ಪಗಿರೋ ಹೊಟ್ಟೆ ಕರಗಿಸಲು ಮನೆಯಂಗಳದಲ್ಲಿಯೇ ಇದೆ ಪರಿಹಾರ: ವಾರದಲ್ಲೇ ನೋಡಿ ರಿಸಲ್ಟ್
ಇನ್ನೂ ರಿಕ್ಕಿ ರೈ ಮೇಲೆ ಫೈರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಮೇಲೆ ನಡೆದಿರೋದು ಮಿಸ್ ಪೈರಿಂಗಾ? ರಿಕ್ಕಿ ರೈ ತೋಟದ ಮನೆ ಸೆಕ್ಯೂರಿಟಿ ಗಳು ಶಾಟ್ ಗನ್ ಬಳಸುತ್ತಾರಂತೆ. ರಿಕ್ಕಿ ರೈ, ಸೆಕ್ಯೂರಿಟಿ ಅಥವಾ ಅಂಗ ರಕ್ಷಕರಿಂದಲೇ ಮಿಸ್ ಫೈರ್ ಶಂಕೆ ವ್ಯಕ್ತವಾಗಿದೆ. ಪ್ರೊಫೆಷನಲ್ ಶೂಟರ್ ಹತ್ಯೆಗೆ ಸ್ಟನ್ ಗನ್ ಅಥವಾ ರಿವಾಲ್ಚಾರ್ ಬಳಸೋದೆ ಹೆಚ್ಚು. ಆದ್ರೆ ಶಾಟ್ ಗನ್ ನಲ್ಲಿ ರಿಕ್ಕಿ ರೈ ಫೈರಿಂಗ್ ನಡೆದಿದೆ.
ಇದೇ ಪೊಲೀಸ್ರಿಗೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಶಾಟ್ ಗನ್ ನಲ್ಲಿ ಸೆಪ್ಟಿ ಕಡಿಮೆ ಇರುತ್ತೆ. ಶಾಟ್ ಗನ್ ನಲ್ಲಿ ಪೈರಿಂಗ್ ರೇಂಜ್ ಕೂಡ ತುಂಬಾ ಕಡಿಮೆ ಇರುತ್ತೆ. ಶಾಟ್ ಗನ್ ಬುಲೆಟ್ ನಲ್ಲಿ ಸಣ್ಣ ಸಣ್ಣ ಬಾಲ್ಸ್ ಬಳಕೆ ಮಾಡಲಾಗುತ್ತೆ. ಇದ್ರಿಂದ ದೂರ ಗುಂಡು ಹೋದಂತೆ ಸಣ್ಣ ಸಣ್ಣ ಗುಂಡುಗಳ ಚದರುತ್ತೆ. ಇದ್ರಿಂದ ಪ್ರಾಣಕ್ಕೆ ಹಾನಿಯಾಗೋ ಸಾಧ್ಯತೆ ತೀರಾ ಕಡಿಮೆ. ಇದೇ ಕಾರಣಕ್ಕೆ ರಿಕ್ಕಿ ರೈ ಬುಜ ಹಾಗು ಮೂಗಿಗೆ ಗಾಯವಾಗಿರೋದು. ಇದೇ ಪೊಲೀಸ್ರ ಅನುಮಾನಕ್ಕೆ ಕಾರಣಚಾಗಿರೋದು. ಇದು ಪ್ರೊಫೆಷನಲ್ ಶೂಟರ್ ಮಾಡಿರಿವ ಬದಲು ಸೆಕ್ಯುರಿಟಿ ಮಿಸ್ ಫೈರ್ ಆಗಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಆಯಾಮದಲ್ಲೂ ಬಿಡದಿ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.