ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಸಿನಿಮಾಗಾಗಿ ಪ್ರೇಕ್ಷಕಪ್ರಭು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಕ್ಕಿರುವ ಬಗ್ಗೆ ಸ್ವತಃ ಚಿತ್ರತಂಡವೇ ಅಪ್ ಡೇಟ್ ಕೊಟ್ಟಿತ್ತು. ಮೊದಲ ದಿನ ಶೂಟಿಂಗ್ ಫೋಟೋ ಹಂಚಿಕೊಂಡು ಯಂಗ್ ಟೈಗರ್ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸುವಂತೆ ಮಾಡಿತ್ತು. ಬರೋಬ್ಬರಿ 2 ಸಾವಿರ ಜೂನಿಯರ್ ಆರ್ಟಿಸ್ಟ್ ಗಳನ್ನು ಅಖಾಡಕ್ಕೆ ಇಳಿಸಿ ನೀಲ್ ಮತ್ತೊಂದು ಮೆಗಾ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹರವಿಡಲು ಹೊರಟಿದ್ದಾರೆ. ವಿಷಯ ಹೀಗಿರುವಾಗ್ಲೇ ತಾರಕ್ ದೇವರ-2 ಮ್ಯಾಟರ್ ಮುನ್ನೆಲೆಗೆ ಬಂದಿದೆ.
ಜೂನಿಯರ್ ಎನ್ ಟಿಆರ್ ಹಾಗೂ ಕೊರಟಾಲ ಶಿವ ಕಾಂಬೋದ ದೇವರ ಪಾರ್ಟ್ 1 ಚಿತ್ರ ಕಳೆದ ವರ್ಷ ತೆರೆಗೆ ಬಂದಿತ್ತು. ಚಿತ್ರತಂಡ ನಿರೀಕ್ಷಿಸಿದಷ್ಟು ಸಕ್ಸಸ್ ಸಿಕ್ಕಿರಲಿಲ್ಲ. ಹೀಗಾಗಿ ಪಾರ್ಟ್ 2 ಬರೋದು ಡೌಟ್ ಎನ್ನಲಾಗಿತ್ತು. ಆದರೀಗ ಪ್ರಶಾಂತ್ ನೀಲ್ ಸಿನಿಮಾ ಪಕ್ಕಕ್ಕಿಟ್ಟು ಟಾಲಿವುಡ್ ಸಿಂಹಾದ್ರಿ ದೇವರ-2 ಪಾರ್ಟ್ ಅಂಗಳಕ್ಕೆ ಇಳಿಯುವ ತಯಾರಿಯಲ್ಲಿದ್ದಾರಂತೆ. ಈ ಚಿತ್ರದ ಚಿತ್ರೀಕರಣವನ್ನು ನಮ್ ರಾಜ್ಯದಲ್ಲಿಯೇ ನಡೆಸಲು ಸ್ವತಃ ತಾರಕ್ ಉತ್ಸಹ ತೋರಿದ್ದಾರೆ ಅನ್ನೋ ವಿಚಾರವೀಗ ಬಹಿರಂಗವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪ್ರಕೃತಿಯ ಒಡಲಿನಲ್ಲಿರುವ ಆಕರ್ಷಣಿಯ ತಾಣವಾಗಿದೆ. ಈ ಜಾಗದಲ್ಲಿ ಸಾಕಷ್ಟು ಸಿನಿಮಾಗಳ ಶುಟಿಂಗ್ ಸದ್ದಿಲ್ಲದೇ ನಡೆದಿದೆ. ಈಗ ದೇವರ ಪಾರ್ಟ್ 2 ಸಿನಿಮಾದ ಚಿತ್ರೀಕರಣವನ್ನು ಚಿತ್ರತಂಡ ಇಲ್ಲೇ ಮಾಡಲು ತೀರ್ಮಾನ ಮಾಡಿದ್ದು, ಅದಕ್ಕಾಗಿ ಸೆಟ್ ಹಾಕಲಾಗುತ್ತಿದೆಯಂತೆ. ಕುಮಟಾ ಸಮೀಪದ ಬೀಚ್ ವೊಂದರಲ್ಲಿ ಸೆಟ್ ಹಾಕಲಾಗುತ್ತಿದ್ದು, ವಿ ಆರ್ಟ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಒಬ್ಬರು ಕರ್ನಾಟಕದವರು ಅನ್ನೋದು ಬಹಳ ವಿಶೇಷ. ಏಪ್ರಿಲ್ 10ರಿಂದ ಚಿತ್ರೀಕರಣ ನಡೆಯಲಿದ್ದು, ಅದಕ್ಕೂ ಮುನ್ನ ಶೂಟಿಂಗ್ ಸೆಟ್ ವೀಕ್ಷಿಸೋದಿಕ್ಕೆ ನಿರ್ದೇಶಕರ ಕೊರಟಾಲ ಶಿವ ಇಲ್ಲಿಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ದೇವರ ಮೊದಲ ಭಾಗದಲ್ಲಿ ಜೂನಿಯರ್ ಎನ್ ಟಿಆರ್ ಗೆ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಪ್ರಕಾಶ್ ರೈ ಮೊದಲಾದವರು ನಟಿಸಿದ್ದರು. ಇನ್ನು, ಪಾರ್ಟ್ 2ನಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದು ಗೊತ್ತಿಲ್ಲ. ಪ್ರಶಾಂತ್ ನೀಲ್ ಸಿನಿಮಾ ಮಾಡ್ತಿರುವ ತಾರಕ್ ಇತ್ತ ದೇವರ-2 ಚಿತ್ರೀಕರಣದಲ್ಲಿಯೂ ಭಾಗಿಯಾಗಲಿದ್ದಾರಾ? ಒಟ್ಟೊಟ್ಟಿಗೆ ಎರಡು ಚಿತ್ರಗಳ ಶೂಟಿಂಗ್ ಸಾಧ್ಯನಾ? ಗೊತ್ತಿಲ್ಲ. ಇನ್ನೂ ಹೃತಿಕ್ ರೋಷನ್ ಜೊತೆ ವಾರ್ 2 ಸಿನಿಮಾ ಮಾಡಿ ಮುಗಿಸಿರುವ ಟಾಲಿವುಡ್ ಸಿಂಹಾದ್ರಿ ಕಮಿಟ್ ಮೆಂಟ್ಸ್ ಏನೆಲ್ಲಾ ಇದೆ ಕಾದುನೋಡಬೇಕು.