ಬಾದಾಮಿ ಕೊಂಚ ದುಬಾರಿಯ ಒಣ ಬೀಜ. ಆದರೆ ಇದರ ಸೇವನೆಯಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬಾದಾಮಿಯಲ್ಲಿ ಇರುವ ವಿಟಮಿನ್ ಇ ಚರ್ಮ, ಕೂದಲು ಹಾಗೂ ಅಂಗಾಂಗಗಳ ರಕ್ಷಣೆಗೆ ಸಹಾಯ ಮಾಡುತ್ತದೆ. ಮಿದುಳಿನ ಆರೋಗ್ಯ, ಹೃದಯದ ಆರೋಗ್ಯ ಮತ್ತು ಜೀರ್ಣ ಕ್ರಿಯೆಯ ಸುಧಾರಣೆಗೆ ಸಹಾಯ ಮಾಡುವುದು.
Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು!
ಈ ಬಾದಾಮಿಯನ್ನು ಹೇಗೆ ತಿನ್ನಬೇಕು/ ಸಿಪ್ಪೆಯೊಂದಿಗೆ ಸವಿದರೆ ಉತ್ತಮವಾದುದ್ದೇ? ಅಥವಾ ಸಿಪ್ಪೆ ತೆಗೆದು ತಿನ್ನುವುದು ಯೋಗ್ಯವಾದುದ್ದೇ? ಎನ್ನುವ ಗೊಂದಲ ಸಾಕಷ್ಟು ಜನರಲ್ಲಿ ಇದೆ. ನೀವು ಸಹ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.
ಬಾದಾಮಿಯನ್ನು ನೆನೆಸಿ ಏಕೆ ತಿನ್ನಬೇಕು?: ಬಾದಾಮಿಯ ಸಿಪ್ಪೆಯನ್ನು ಗಟ್ಟಿಯಾಗಿರುತ್ತದೆ. ಇದನ್ನು ನೆನೆಸಿ ಸಿಪ್ಪೆ ಸುಲಿದರೂ ಬಾದಾಮಿ ದಪ್ಪವಾಗಿರುತ್ತದೆ. ಸಿಪ್ಪೆ ಸಮೇತ ಬಾದಾಮಿ ತಿನ್ನುವುದರಿಂದ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಇದು ವಿಶೇಷವಾಗಿ ಜೀರ್ಣಕಾರಿ ಅಸ್ವಸ್ಥತೆಗಳಿರುವವರಿಗೆ ಅನಗತ್ಯ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹಾಗಾಗಿ ಬಾದಾಮಿಯನ್ನು ನೆನೆಸಿ ಸಿಪ್ಪೆ ಸುಲಿದು ತಿನ್ನಬೇಕು. ಬಾದಾಮಿಯನ್ನು ನೆನೆಸುವುದರಿಂದ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು. ರಾತ್ರಿಯಿಡೀ ಬಾದಾಮಿ ನೆನೆಸಿದರೆ ಬೆಳಗ್ಗೆ ಸಿಪ್ಪೆ ಸುಲಿಯಲು ಸುಲಭವಾಗುತ್ತದೆ.
ಸಿಪ್ಪೆ ಸುಲಿಯದೇ ಬಾದಾಮಿ ತಿಂದರೆ ಏನಾಗುತ್ತದೆ?: ಜೀರ್ಣಿಸಿಕೊಳ್ಳಲು ಕಷ್ಟ. ಇದರ ಅಡ್ಡಪರಿಣಾಮವಾಗಿ ವಾಯು ಮತ್ತು ಅತಿಸಾರದಂತಹ ಅಸ್ವಸ್ಥತೆಗಳು ಸಂಭವಿಸಬಹುದು. ಇದಲ್ಲದೇ ಸಿಪ್ಪೆಯಲ್ಲಿರುವ ಆ್ಯಂಟಿ ನ್ಯೂಟ್ರಿಯೆಂಟ್ಸ್, ಟ್ಯಾನಿಕ್ ಮತ್ತು ಫೈಟಿಕ್ ಆಸಿಡ್ ಪೋಷಕಾಂಶಗಳನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ರಕ್ತದಲ್ಲಿ ಪಿತ್ತರಸ ಹೆಚ್ಚಾಗಬಹುದು. ಆದ್ದರಿಂದ ರಾತ್ರಿಯಿಡೀ ಅದರ ಸಿಪ್ಪೆಯನ್ನು ನೆನೆಸಿ, ನಂತರ ಸಿಪ್ಪೆ ಸುಲಿದು ತಿನ್ನಿ.
ದಿನಕ್ಕೆ ಎಷ್ಟು ಬಾದಾಮಿ ತಿನ್ನಬಹುದು?: ಪ್ರತಿದಿನ 5-10 ಬಾದಾಮಿ ತಿನ್ನಬಹುದು. ಆದರೆ ರಾತ್ರಿಯಿಡೀ ನೆನೆಸಿಟ್ಟು ಮರುದಿನ ಸಿಪ್ಪೆ ಸುಲಿದು ನಂತರ ತಿನ್ನಿ. ಈ ರೀತಿ ತಿನ್ನುವುದರಿಂದ ಬೆಳಗ್ಗೆ ಹೊತ್ತು ನೀವು ಶಕ್ತಿಯುತ ಮತ್ತು ಉತ್ಸಾಹಭರಿತವಾಗಿ ದಿನವಿಡೀ ಇರುತ್ತೀರಿ.
ಬಾದಾಮಿಯಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಇ, ಒಮೆಗಾ 3, ಒಮೆಗಾ 6, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸತುವು ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಪ್ರತಿದಿನ ಕನಿಷ್ಠ 5 ಬಾದಾಮಿಗಳನ್ನು ತಿನ್ನಿ. ಇದರ ಹೊರತಾಗಿ ಬಾದಾಮಿ ಮೆದುಳು ಮತ್ತು ನರಗಳಿಗೆ ಒಳ್ಳೆಯದು. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ದೇಹದ ಬೆಳವಣಿಗೆ ಮತ್ತು ಬದಲಾವಣೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.