ರಾಯಚೂರು: ರಾಜಕೀಯ ಎದುರಾಳಿಗಳನ್ನು ಕಟ್ಟಿಹಾಕೋಕೆ ದೇವಸ್ಥಾನಗಳಲ್ಲಿ ಹೋಮ-ಹವನ ಮಾಡಿಸೋ ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ ರೇವಣ್ಣ, ಇದೀಗ ಮಂತ್ರಾಲಯದ ರಾಯರ ಮೊರೆ ಹೋಗಿದ್ದಾರೆ.
ಮೊನ್ನೆಯಷ್ಟೇ ಮಾಜಿ ಪ್ರಧಾನಿ ದೇವೇಗೌಡರ ಜತೆ ತಿರುಪತಿಗೆ ಹೋಗಿದ್ದ ರೇವಣ್ಣ, ಶೃಂಗೇರಿಗೂ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರಂತೆ. ಈಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನಕ್ಕೆ ಮುಂದಾಗಿದ್ದಾರೆ.
ಕೆಲವು ಶಕ್ತಿಗಳನ್ನ ದಮನ ಮಾಡೋದಕ್ಕೆ ದೇವರ ಹತ್ರನೇ ಹೋಗಬೇಕಲ್ವಾ ಅನ್ನೋ ಮೂಲಕ ದುಷ್ಟ ಶಕ್ತಿಗಳ ದಮನಕ್ಕೆ ರಾಯರ ಮೊರೆ ಹೋಗ್ತಿರೋದಾಗಿ ಹೇಳ್ಕೊಂಡಿದ್ದಾರೆ.
ನಾನು ದೇವರ ಹತ್ರ ಹೋಗ್ತೀನಿ, ಹೀಗಾಗಿ ಯಾವ ಶಕ್ತಿ ನನ್ನನ್ನು ಕಾಡ್ತಿಲ್ಲ. ದೈವ ಶಕ್ತಿ, ಜನರ ಶಕ್ತಿ ಇರೋವರೆಗೂ ಯಾವ ಶಕ್ತಿ ಕಾಡಲ್ಲ ಎಂದು ರಾಯಚೂರಿನಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್.ಡಿ.ರೇವಣ್ಣ ಟಾಂಗ್ ಕೊಟ್ಟಿದ್ದಾರೆ.
ಏನು ಹೇಳೊ ಶಕ್ತಿ ಇಲ್ಲ..
ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಏನು ಹೇಳುವ ಶಕ್ತಿ ಇಲ್ಲ. ರಾಜ್ಯದ ಜನತೆ ಕಾಂಗ್ರೆಸ್ಗೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ನೋಡೋಣ ಸರ್ಕಾರ ಏನು ಮಾಡ್ತಾರೆ ಅಂತ. ಈಗಾಗ್ಲೆ ಐದನೇ ಗ್ಯಾರಂಟಿ, ಆರನೇ ಗ್ಯಾರಂಟಿ, ಏಳನೇ ಗ್ಯಾರಂಟಿ ಅಂತ ಹೇಳ್ತಿದ್ದಾರೆ. ಮಳೆಯಿಂದ ಬೆಳೆ ನಾಶ ಆಗಿದೆ. ಸರ್ಕಾರ ಬೆಳೆ ಪರಿಹಾರ ಕೊಡಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ ಲೆಕ್ಕಿಸದೇ ಕಾಂಗ್ರೆಸ್ ಸರ್ಕಾರ ಸಮಾವೇಶ ಮಾಡಿದ್ದನ್ನು ಖಂಡಿಸಿದ ಮಾಜಿ ಸಚಿವ ಎಚ್.ಡಿ ರೇವಣ್ಣ, ಅದನ್ನ ರಾಜ್ಯದ ಜನತೆಗೆ ಬಿಡ್ತಿವಿ. ಸರ್ಕಾರ ಎರಡು ವರ್ಷ ಏನು ಕೆಲಸ ಮಾಡಿದೆ. ಕಾಲವೇ ನಿರ್ಧಿರಿಸುತ್ತೆ ಎಂದಿದ್ದಾರೆ.