ಬೆಂಗಳೂರು:- ಮಹಿಳೆಯರಿಗೆ ಖಾಸಗಿ ಅಂಗ ತೋರಿ ವಿಕೃತಿ ಮೆರೆಯುತ್ತಿದ್ದ ಬೀದಿ ಕಾಮಣ್ಣನನ್ನು ಶಿವಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರ್ತಿಕ್ ಬಂಧಿತ ಆರೋಪಿ.
ಈತ ಹಿಳೆಯರಿಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ. ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಏಪ್ರಿಲ್ 13 ರಂದು 10.30 ಕ್ಕೆ 4 ಕೃತ್ಯ ನಡೆದಿತ್ತು. ಅಂದು ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ಮಹಿಳೆ ತೆರಳ್ತಿದ್ದರು. ಈ ವೇಳೆ ಎದುರು ಮನೆಯಲ್ಲಿರುವ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ.
ಇನ್ನೂ ಇದನ್ನು ಪ್ರಶ್ನೆ ಮಾಡಿದ ಮಹಿಳೆ ಪತಿ ಮೇಲೆ ಆಸಾಮಿ ಹಲ್ಲೆ ಮಾಡಿದ್ದ. ಅಲ್ಲದೇ ಜಗಳ ಬಿಡಿಸಲು ಬಂದವರ ಮೇಲು ಅಟ್ಯಾಕ್ ಮಾಡಿದ್ದ. ಎರಡನೇ ಮಹಡಿಯಿಂದ ಹಾಲೋಬ್ಲಾಕ್, ಹೂವಿನ ಪಾಟ್ ಕೆಳ ಮಹಡಿಯಲ್ಲಿದ್ದವರ ಮೇಲೆ ಎಸೆದಿದ್ದ. ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿತ್ತು. ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕಾರ್ತಿಕ್ ನನ್ನು ಬಂಧಿಸಿದ್ದಾರೆ.