ಬೆಂಗಳೂರು:- ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯುದ್ಧ ಪ್ರಾರಂಭ ಮಾಡಲಿ ಎಂದು ಬಸವರಾಜ ರಾಯರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ.
ಎನಕೌಂಟರ್ ಪ್ರಕರಣ ಶೀಘ್ರವಾಗಿ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ: ಆಯೋಗದ ಅಧ್ಯಕ್ಷ ಡಾ.ಶಾಮ್ ಭಟ್..!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಘಟನೆ ಸೇಡು ತೀರಿಸಿಕೊಳ್ಳಲು ಕೂಡಲೇ ಕೇಂದ್ರ ಸರ್ಕಾರ ಯುದ್ಧ ಪ್ರಾರಂಭ ಮಾಡಬೇಕು. ಅಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಾದ ಅಶೋಕ್, ವಿಜಯೇಂದ್ರ ಸಿಎಂ ವಿರುದ್ಧದ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರು ಯುದ್ಧ ಬೇಡ ಅಂತ ಹೇಳಿಲ್ಲ. ಅವರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಅಶೋಕ್, ವಿಜಯೇಂದ್ರ ಅವರು ಸಿಎಂ ವಿರುದ್ಧ ಮಾತನಾಡೋದು ಸರಿಯಲ್ಲ. ಕೂಡಲೇ ಇಬ್ಬರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹ ಮಾಡಿದರು. ಸಿಎಂ ಅವರ ಹೇಳಿಕೆ ಪಾಕಿಸ್ತಾನದಲ್ಲಿ
ಬಂದರೆ ಅದಕ್ಕೂ ನಮಗೂ ಸಂಬAಧವಿಲ್ಲ. ಸಿದ್ದರಾಮಯ್ಯ ಯಾವತ್ತೂ ದೇಶದ ವಿರುದ್ಧ ಮಾತಾಡಿಲ್ಲ ಎಂದು ಸಿಎಂ ಪರ ಬ್ಯಾಟ್ ಬೀಸಿದರು.
ಕೇಂದ್ರ ಸರ್ಕಾರ ಕೂಡಲೇ ಪಾಕಿಸ್ತಾನದ ವಿರುದ್ದ ಯುದ್ಧ ಪ್ರಾರಂಭ ಮಾಡಬೇಕು. ಯಾಕೆ ಇನ್ನೂ ಯುದ್ಧ ಮಾಡಲು ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಕಾಶ್ಮೀರಕ್ಕೆ ಹೋಗಿದ್ರು. ಪ್ರಧಾನಿ ಮೋದಿ ಹೋಗಿರಲಿಲ್ಲ. ಕೂಡಲೇ ಪ್ರಧಾನಿ ಮೋದಿ ಕಾಶ್ಮೀರಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.