ಮೈಸೂರು: ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಬಂತಾ? ಗಾಂಧೀಜಿಯ ಶಾಂತಿ ಮಂತ್ರದಿಂದ ಮಾತ್ರ ಸ್ವಾತಂತ್ರ್ಯ ಬರಲಿಲ್ಲ.
ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್ರಂಥ ಕ್ರಾಂತಿಕಾರಿಗಳ ಕೊಡುಗೆ ಮುಖ್ಯ ಆಗಿತ್ತು. ಯುದ್ಧ ಗೆದ್ದ ಮೇಲೆ ಶಾಂತಿ ಸ್ಥಾಪನೆ ಮಾಡ್ತೀವಿ. ಶಾಂತಿ ಸ್ಥಾಪನೆಗಾಗಿಯೇ ಯುದ್ಧ ಮಾಡ್ತಾ ಇರೋದು ಎಂದು ತಿಳಿಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಮೊದಲು ಯುದ್ಧ ಬೇಡ ಎಂದು ಪಾಕಿಸ್ತಾನಿಗಳಿಗೆ ಹೀರೋ ಆಗಿದ್ದರು. ಜನ ಥೂ ಛೀ ಅಂತಾ ಉಗಿದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದರು. ಇವತ್ತು ಕಾಂಗ್ರೆಸ್ ಶಾಂತಿಯ ಮಂತ್ರದ ಟ್ವೀಟ್ ಮಾಡಿತ್ತು.
ಜನ ತಿರುಗಿ ಬಿದ್ದ ಮೇಲೆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಜನಕ್ಕೆ ಹೆದರಿ ಸಿದ್ದರಾಮಯ್ಯ ಇಂದು ಹಣೆಗೆ ಸಿಂಧೂರ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಇಂದು ಸಿಂಧೂರರಾಮಯ್ಯ ಆಗಿದ್ದಾರೆ. ಹಿಂದೂಗಳು ಒಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ ಎಂದು ಟಾಂಗ್ ಕೊಟ್ಟಿದ್ದಾರೆ.