ಕಲಬುರ್ಗಿ:- ಪಾಕ್ ವಿರುದ್ಧ ಯುದ್ಧ ಬೇಡ ಅಂತ ಸಿದ್ದರಾಮಯ್ಯ ಹೇಳಿಯೇ ಇಲ್ಲ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಸಮರ್ಥನೆ ಮಾಡಿಕೊಂಡಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ವಿಸ್ತರಿಸಿದ ರಾಜ್ಯ ಸರ್ಕಾರ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ಘಟನೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಹೇಳಿಯೇ ಇಲ್ಲ. ಏನಿದ್ದರೂ ಮೊದಲು ಭದ್ರತೆ ಖಚಿತಪಡಿಸಿಕೊಂಡು ನಂತರ ಯುದ್ಧ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದರು.
ಸಿಎಂ ಯುದ್ಧ ಬೇಡ ಎಂದಿಲ್ಲ. ದೇಶದ ಅಖಂಡತೆ ಮತ್ತು ಸಾರ್ಮಭೌಮತ್ವಕ್ಕೆ ಧಕ್ಕೆ ಬಂದಲ್ಲಿ ಹಾಗೂ ಅನಿವಾರ್ಯತೆ ಎನಿಸಿದರೆ ಯುದ್ಧ ಮಾಡಿ ಎಂದಿದ್ದಾರೆ. ಮೇಲಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪಷ್ಪಪಡಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ತಮ್ಮ ಪಕ್ಷದ ಬೆಂಬಲ ಇರುತ್ತದೆ ಎಂದು ಹೇಳಿದ ಮೇಲೆ ಇನ್ನೇನಿದೆ. ಇಷ್ಟು ದಿನ ತೂಕಡಿಸುತ್ತಾ, ಈಗ ಅಲ್ಲಿ ಯುದ್ಧ ಇಲ್ಲಿ ಯುದ್ಧ ಅಂತಿದ್ದೀರಿ. ಹಿಂದೆ ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ 80 ಸಾವಿರ ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದ್ದರು. ನಾವು ಮಾಡಿರುವುದರನ್ನು ನೋಡಿದರೆ ಇವರು ಏನೇನೂ ಅಲುಗಾಡಿಸುವುದಕ್ಕೆ ಆಗುವುದಿಲ್ಲ. ಬಿಜೆಪಿಯವರು ಬರೀ ಚಾಡಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ. ಸುಳ್ಳು ಅವರ ಮನೆಯ ದೇವರು ಎಂದು ವಾಗ್ದಾಳಿ ನಡೆಸಿದರು.