ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಪಕ್ಷದ ರಾಷ್ಟ್ರ ನಾಯಕರ ನಿರ್ಧಾರವನ್ನೇ ಅಂತಿಮವೆಂದು ಮಾನ್ಯ ಮಾಡುವುದಾಗಿ ಹಾಗೂ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, “ನಾನು ರಾಜೀನಾಮೆ ಕೊಡುವೆ ಎಂಬ ಸುದ್ದಿಗಳ ಬಗ್ಗೆ ಯಾವುದೇ ಕೃತಕ ಚರ್ಚೆಗಳಿಗೆ ಉತ್ತರ ನೀಡುವುದಿಲ್ಲ. ನನ್ನ ಬಗ್ಗೆ ಕೇಂದ್ರದ ನಾಯಕತ್ವ ಏನು ತೀರ್ಮಾನಿಸುತ್ತದೋ ಅದನ್ನು ನಾನು ಗೌರವಿಸುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ವಿಜಯೇಂದ್ರ ಆರೋಪಿಸಿದ್ದು, “ರಾಜೀನಾಮೆ ಪರ್ವ ಈಗ ದೆಹಲಿಗೆ ವರ್ಗಾಯಿಸುತ್ತಿದೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈಗಾಗಲೇ ರಾಜ್ಯದ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಬೆಳವಣಿಗೆ ಸಿದ್ದರಾಮಯ್ಯ ರಾಜೀನಾಮೆಗೆ ಮುನ್ನುಡಿ ಹಾಕುವಂತಿದೆ,” ಎಂದರು.
“ಅವರು ಪಕ್ಷದ ಒಬಿಸಿ ಸಲಹಾ ಸಮಿತಿಯ ಅಧ್ಯಕ್ಷರಾಗಲಿದ್ದಾರೆ ಎಂಬ ಸೂಚನೆ ಕೂಡ ಇದೆ. ಅಂದರೆ, ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳಲಿರುವುದು ಬಹುತೇಕ ಖಚಿತ. ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆ ನಿರಾಕರಿಸಲು ಆಗದು,” ಎಂದು ಹೇಳಿದರು.
ಮುಡಾ ಹಗರಣದ ಕುರಿತು ಮಾತನಾಡಿದ ವಿಜಯೇಂದ್ರ, “ಈ ಪ್ರಕರಣದಲ್ಲಿ ಸಿಎಂ ಪತ್ನಿ 14 ನಿವೇಶನಗಳನ್ನು ಹಿಂತಿರುಗಿಸಿರುವುದರಿಂದ ಹಗರಣದ ಅಸ್ತಿತ್ವವನ್ನು ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಕಳೆದ ವರ್ಷವೇ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ರಾಜಕೀಯ ಧೃಡತೆಯ ದೃಷ್ಟಿಕೋನದಿಂದ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ,” ಎಂದು ಟೀಕಿಸಿದರು.
ಇದಕ್ಕೂ ಹೊರತು, “ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸೊಗಸಿನಿಂದ ಅಧಿಕಾರಕ್ಕೆ ಬಂದಿದೆ. ಆದರೆ ಈಗ ಅದು ಜನಸಾಮಾನ್ಯರ ಜೇಬಿಗೆ ಹೊಡೆತ ನೀಡುತ್ತಿದೆ. ದಿನಬಳಕೆದಿನ ಸರಕುಗಳ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ ದರ ಹೆಚ್ಚಳ ಜನರ ಜೀವನಕ್ಕೆ ಭಾರೀ ಹೊರೆ ತಂದಿದೆ,” ಎಂದು ಕಠಿಣ ವಾಗ್ದಾಳಿ ನಡೆಸಿದರು.