ಕೊಪ್ಪಳ:- ಮುಂದಿನ ಐದು ವರ್ಷ ಸಿದ್ದರಾಮಯ್ಯನವೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ ಕೊಟ್ಟಿದ್ದಾರೆ.
ಕೋಲಾರ – ಪತ್ರಕರ್ತರು ವೃತ್ತಿಧರ್ಮಪಾಲಿಸಿ, ಬರಹದಲ್ಲಿ ಸಮಾಜದ ಹಿತವಿರಲಿ- ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
ಈ ಸಂಬಂಧ ಕೊಪ್ಪಳದಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷ ಸಿದ್ದರಾಮಯ್ಯನವೇ ಸಿಎಂ. ಸಿಎಂ ಸ್ಥಾನ ಬದಲಾವಣೆ ಮಾತೇ ಇಲ್ಲ. ನಮ್ಮ ಯಾವ ಶಾಸಕರಿಗೂ ಅಸಮಾಧಾನ ಇಲ್ಲ. ಅಸಮಾಧಾನ ನಿಮ್ಮ ಮಾಧ್ಯಮಗಳಲ್ಲಿ ಓಡಾಡ್ತಾ ಇದೆ. ಶಾಸಕರು, ಸಚಿವರ ಬಗ್ಗೆ , ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿಲ್ಲ. ಅಧಿಕಾರಿಗಳ ಬಗ್ಗೆ ಮಾತನಾಡಿದ್ದಾರೆ.
ಸುರ್ಜೇವಾಲ ಬಂದಿದ್ದಾರೆ ಏನೇ ಇದ್ರೂ ಸಮಸ್ಯೆ ಬಗೆಹರಿಸುತ್ತಾರೆ. ನಮ್ಮ ಸಿಎಂ ಹಾಗೂ ಡಿಸಿಎಂ ಸ್ಟ್ರಾಂಗ್ ಇದ್ದಾರೆ ಎಲ್ಲವನ್ನೂ ಬಗೆಹರಿಸುತ್ತಾರೆ ಎಂದರು. ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಯಾರೂ ಹೇಳಿದ್ದಾರೋ ಅವರನ್ನೇ ಕೇಳಬೇಕು. ನನಗೆ ಗೊತ್ತಿರೋ ಪ್ರಕಾರ ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿ ಇರ್ತಾರೆ. ನನಗೆ ಸಚಿವ ಸ್ಥಾನ ಕೊಡೋದು ಹೈಕಮಾಂಡ್ ತೀರ್ಮಾನ ಮಾಡಬೇಕು. ಇದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದರು.