ಬೆಂಗಳೂರು:- ಸಿದ್ದರಾಮಯ್ಯ ಸಿಎಂ ಸೀಟ್ ನಿಂದ ಕೆಳಗಿಳಿಯೋದು ಖಚಿತ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗೇ ಆಗ್ತಾರೆ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಡಿಕೆಶಿ ಹಾಗೇ ಹೇಳಿರೋದ್ರಿಂದ ಅವರಿಗೆ ಸಿಎಂ ಆಸೆ ಇದೆ ಎಂದು ಅರ್ಥ ಅಲ್ವ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಇದನ್ನ ನಾನು ಹೇಳೋದು ಅಲ್ಲ, ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ ಎಂದಿದ್ದಾರೆ.
ಲಾಟರಿ ಸಿಎಂ ಅಂದವರು ಯಾರು? ಇಕ್ಬಾಲ್ ಹುಸೇನ್ ಡಿಕೆಶಿ ಸಿಎಂ ಆಗ್ತಾರೆ ಅಂತಾರೆ. ಕಾಂಗ್ರೆಸ್ ಶಾಸಕರೇ ಡಿಕೆಶಿ ಸಿಎಂ ಆಗ್ತಾರೆ ಅಂತಿದ್ದಾರೆ. ನಮ್ಮನ್ನ ಟೀಕೆ ಮಾಡೋದಲ್ಲ. ನಿಮ್ಮ ಪಕ್ಷವನ್ನು ಮೊದಲು ಸರಿ ಮಾಡಿ, ಅವರಿಗೆ ಮದ್ದು ಅರೆಯಿರಿ ಎಂದು ತಿರುಗೇಟು ನೀಡಿದ್ದಾರೆ.