ಸಿಂಪಲ್ ಸ್ಟಾರ್ ರಕ್ಷಿಣ್ ಶೆಟ್ಟಿ ಕಾಣೆಯಾಗಿದ್ದಾರೆ. ಹೀಗಂತಾ ನಾವ್ ಹೇಳ್ತಿಲ್ಲ. ಇದು ಅವರ ಅಭಿಮಾನಿಗಳ ಮಾತು. 777 ಚಾರ್ಲಿ ಸಿನಿಮಾ ಆದ್ಮೇಲೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ರಕ್ಷಿತ್ ಆ ನಂತರೆ ಫುಲ್ ಸೈಲೆಂಟ್ ಆಗಿದ್ದಾರೆ. ಅವರ ಸುದ್ದಿಯೇ ಇಲ್ಲ. ಎಲ್ಲೋದ್ರು ಸಿಂಪಲ್ ಸ್ಟಾರ್ ಅಂತಾ ಹುಡುಕಲು ಶುರು ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಬಳಿಕ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೋನಿ ಸಿನಿಮಾ ಟೇಕಾಫ್ ಮಾಡಬೇಕಿತ್ತು. ಹೊಂಬಾಳೆ ಬ್ಯಾನರ್ನಡಿ ಈ ಚಿತ್ರ ಮೂಡಿ ಬರಬೇಕಿತ್ತು. ಸಣ್ಣ ಟೀಸರ್ ಬಿಟ್ಟು ಥ್ರಿಲ್ ಹೆಚ್ಚಿಸಿದ್ದ ಸಿಂಪಲ್ ಸ್ಟಾರ್ ಈಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡೋದಿಕ್ಕೆ ರೆಡಿಯಾಗಿದ್ದಾರೆ.
ರಕ್ಷಿತ್ ಶೆಟ್ಟಿ ಬಹುನಿರೀಕ್ಷಿತ ಸಿನಿಮಾ ರಿಚರ್ಡ್ ಆಂಟೋನಿ ಶೀಘ್ರದಲ್ಲೇ ಸೆಟ್ಟೇರಲಿದ್ದು, ಮುಂದಿನ ವರ್ಷ ಬಿಡುಗಡೆಯಾಗುವುದು ಖಚಿತ ಅಂತಾ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಹೇಳಿಕೇಳಿ ರಿಚರ್ಡ್ ಆಂಟೋನಿ ಸಿನಿಮಾ ಉಳಿದವರು ಕಂಡಂತೆ ಸಿನಿಮಾದ ಪ್ರೀಕ್ವೆಲ್. ಉಡುಪಿಯಲ್ಲಿಯೇ ಇಡೀ ಸಿನಿಮಾದ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ರಕ್ಷಿತ್ ಸದ್ಯ ಉಡುಪಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಸದ್ಯದಲ್ಲೇ 20 ಜನರ ನನ್ನ ತಂಡ ಕೂಡ ಉಡುಪಿಗೆ ಶಿಫ್ಟ್ ಆಗಲಿದೆಯಂತೆ,
ರಿಚರ್ಡ್ ಆಂಟೋನಿ ಸಿನಿಮಾದ ಸ್ಕ್ರೀಪ್ಟ್ ಕೆಲಸ ಮುಗಿದಿದ್ದು, ಇದರ ಜೊತೆಗೆ ಪುಣ್ಯಕೋಟಿ 1 ಮತ್ತು 2 ಸಿನಿಮಾ ಹಾಗೂ ಮಿಡ್ ವೇ ಟು ಮೋಕ್ಷ ಸಿನಿಮಾಗಳ ಢ್ರಾಪ್ಟ್ ಸ್ಕ್ರೀಪ್ಟ್ ರೆಡಿಯಾಗಿದಂಯಂತೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವ ಯೋಚನೆಯನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಕಿಕೊಂಡಿದ್ದಾರೆ.