Close Menu
Ain Live News
    Facebook X (Twitter) Instagram YouTube
    Wednesday, June 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಟರ್ಬುಲೆನ್ಸ್ ಗೆ ಸಿಲುಕಿದ ಸಿಂಗಪುರ ಏರ್ ಲೈನ್ಸ್: 22 ಮಂದಿ ಬೆನ್ನುಹುರಿ, 6 ಮಂದಿ ಮೆದುಳಿಗೆ ಗಾಯ

    By Author AINMay 24, 2024
    Share
    Facebook Twitter LinkedIn Pinterest Email
    Demo

    ಮೇ 21ರಂದು ಸಿಂಗಪುರ ಏರ್‌ಲೈನ್ಸ್ ಕಂಪನಿಯ ವಿಮಾನವೊಂದು ಹಿಂದೂ ಮಹಾಸಾಗರದ ಮೇಲೆ ಸಾಗುತ್ತಿದ್ದಾಗ ತೀವ್ರ ಟರ್ಬುಲೆನ್ಸ್‌ಗೆ ಸಿಲುಕಿ, ಮೂರು ನಿಮಿಷದಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟನ್‌ ಪ್ರಜೆಯೊಬ್ಬರು ಮೃತಪಟ್ಟಿದ್ದರು, ಇದೀಗ, ವಿಮಾನದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿರುವುದು ವರದಿಯಾಗಿದೆ.

    ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 22 ಪ್ರಯಾಣಿಕರಿಗೆ ಬೆನ್ನುಹುರಿ ಗಾಯ, 6 ಮಂದಿಗೆ ಮಿದುಳು ಮತ್ತು ಬುರುಡೆಯಲ್ಲಿ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    20 ಮಂದಿ ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ಬ್ಯಾಂಕಾಕ್‌ನ ಸಮಿತಿವೇಜ್ ಶ್ರೀನಕರಿನ್ ಆಸ್ಪತ್ರೆಯ ನಿರ್ದೇಶಕ ಡಾ. ಅದಿನುನ ಕಿಟ್ಟಿರಾಟನಪೈಬುಲ್ ಹೇಳಿರುವುದಾಗಿ ದಿ ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ.

    ಚಿಕಿತ್ಸೆ ಪಡೆಯುತ್ತಿರುವವರಲ್ಲಿ 83 ವರ್ಷದ ಹಿರಿಯ ವ್ಯಕ್ತಿ ಹಾಗೂ 2 ವರ್ಷ ಕಿರಿಯ ಮಗು ಸೇರಿದೆ. ಲಂಡನ್‌ನಿಂದ ಸಿಂಗಪುರಕ್ಕೆ ತೆರಳುತ್ತಿದ್ದ SQ321 ವಿಮಾನವು ಬ್ಯಾಂಕಾಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. 40 ಪ್ರಯಾಣಿಕರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

    ಟೇಕಾಫ್ ಆಗಿ 10 ಗಂಟೆಗಳ ಬಳಿಕ ವಿಮಾನವು ಇರಾವಾಡಿ ಬಳಿ 37,000 ಅಡಿ ಎತ್ತರದಲ್ಲಿದ್ದಾಗ ಟರ್ಬುಲೆನ್ಸ್‌ನ ಹೊಡೆತಕ್ಕೆ ಸಿಕ್ಕಿತ್ತು. ಬಳಿಕ, ಮೂರೇ ನಿಮಿಷಗಳ ಅವಧಿಯಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದಿತ್ತು. ಘಟನೆಯಲ್ಲಿ 60ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು. 65 ಪ್ರಯಾಣಿಕರು ಮತ್ತು ಇಬ್ಬರು ವಿಮಾನದ ಸಿಬ್ಬಂದಿ ಚಿಕಿತ್ಸೆಗಾಗಿ ಈಗಲೂ ಥಾಯ್ಲೆಂಡ್ ರಾಜಧಾನಿಯಲ್ಲೇ ಇದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಸ್ಕ್..! ಕಾರಣವೇನು ಗೊತ್ತಾ..?

    June 4, 2025

    ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ!

    June 3, 2025

    TikTok star: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಮೇಲೆ ಗುಂಡಿಕ್ಕಿ ಹತ್ಯೆ..!

    June 3, 2025

    ಪಾಕಿಸ್ತಾನದಲ್ಲಿ ಭೂಕಂಪ: ಜೈಲಿನ ಗೋಡೆ ಕುಸಿತ, 216 ಕೈದಿಗಳು ಪರಾರಿ

    June 3, 2025

    ಬಾಂಗ್ಲಾ ಮಾಜಿ ಪ್ರಧಾನಿ ವಿರುದ್ಧ ವಿಚಾರಣೆ ಶುರು: ಶೇಖ್ ಹಸೀನಾಗೆ ಮರಣದಂಡನೆ ಸಾಧ್ಯತೆ!

    June 2, 2025

    ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಆಗಿದ್ದೇನು? ಆಮೇಲೇನಾಯ್ತು?

    June 1, 2025

    Nigeria floods: ನೈಜೀರಿಯಾದಲ್ಲಿ ಪ್ರವಾಹ: 111 ಮಂದಿ ಸಾವು

    May 31, 2025

    Trump – Musk: ಸ್ನೇಹಕ್ಕೆ ಅಂತ್ಯ..! ಡೊನಾಲ್ಡ್ ಟ್ರಂಪ್ ಆಡಳಿತದಿಂದ ಹಿಂದೆ ಸರಿದ ಎಲೋನ್ ಮಸ್ಕ್

    May 30, 2025

    Vladimir Putin: ರಷ್ಯಾ ಅಧ್ಯಕ್ಷ ಪುಟಿನ್ ಹೆಲಿಕಾಪ್ಟರ್ ಮೇಲೆ ಡ್ರೋನ್ ದಾಳಿ ಮಾಡಿದ್ದು ನಿಜವೇ..?

    May 26, 2025

    ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರಾಟ ಮಾಡುತ್ತಿದ್ದಾರೆ: ಶೇಕ್ ಹಸೀನಾ ಆರೋಪ

    May 26, 2025

    ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ ಸೈಬರ್ ಕಳ್ಳರು..!

    May 26, 2025

    ಪಾಕಿಸ್ತಾನಕ್ಕೆ ಶತಕೋಟಿ ಡಾಲರ್ ನೆರವನ್ನು ಸಮರ್ಥಿಸಿಕೊಂಡ IMF.!

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.