ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಕಳೆದ ವಾರದ ಹಿಂದಷ್ಟೇ ಭಾರೀ ಸದ್ದು ಮಾಡಿತ್ತು. ಅಪ್ಪ ಅಮ್ಮನ ಬಿಟ್ಟು ಪೃಥ್ವಿ ಮದುವೆಯಾಗಿದ್ದಾರೆ. ನನ್ನ ಮಗಳನ್ನು ವಶೀಕರಣ ಮಾಡಿದ್ದಾರೆ ಅಂತೆಲ್ಲಾ ಅವರ ತಂದೆ ಆರೋಪ ಮಾಡಿದ್ದರು. ಆ ಬಳಿಕ ಪೃಥ್ವಿ ಭಟ್ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದರು. ಇಷ್ಟೆಲ್ಲಾ ವಿವಾದ ಬಳಿಕ ಇದೀಗ ಗಾಯಕಿ ಪೃಥ್ವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಪೃಥ್ವಿ ಭಟ್ ಮದುವೆ ಬಳಿಕ ಪತಿ ಅಭಿಷೇಕ್ ಅವರೊಂದಿಗೆ ರಾಯರ ದರ್ಶನ ಪಡೆದಿದ್ದಾರೆ. ಮಂತ್ರಾಯಲಕ್ಕೆ ಭೇಟಿ ಕೊಟ್ಟಿರುವ ಅವರ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಂದ ಪೃಥ್ವಿ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ಜೀ ಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಕಾಸರಗೋಡು ಮೂಲದ ಗಾಯಕಿ ಪೃಥ್ವಿ ಭಟ್ ಮಾರ್ಚ್ 27 ರಂದು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ ಅಭಿಷೇಕ್ ಎಂಬವರ ಜೊತೆ ಮದುವೆಯಾಗಿದ್ದರು. ಮಗಳ ಮದುವೆ ಬಗ್ಗೆ ತಂದೆ ಶಿವಪ್ರಸಾದ್ ಮಾತನಾಡಿದ್ದ ಆಡಿಯೋ ಹೊರಬಂದು ಚರ್ಚೆ ಹುಟ್ಟುಹಾಕಿತ್ತು. ಸಾಧ್ಯವಾದರೆ ನನ್ನನ್ನು ಕ್ಷಮಿಸಿ ನನ್ನಿಂದ ತಪ್ಪಾಗಿದೆ ಎಂದು ಪೃಥ್ವಿ ಭಟ್ ಆಡಿಯೋ ಮೂಲಕ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದರು.