ಚಿಕ್ಕಬಳ್ಳಾಪುರ: ಕೃಷಿ ಹೊಂಡದ ಪೈಪ್ ಸರಿ ಮಾಡಲು ಹೋಗಿ ಅಕ್ಕ ತಂಗಿ ನೀರು ಪಾಲಾಗಿದ್ದಾರೆ. ಚಿಕ್ಕಬಳ್ಳಾಪುರ ಲ್ಲೆಯ ಚೇಳೂರು ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕುರಪ್ಪಲಿ ಗ್ರಾಮದ 17 ವರ್ಷದ ರಾಧಾ ಮತ್ತು 14 ವರ್ಷದ ಸಾಹಿತಿ, ಮೃತ ಸಹೋದರಿಯರು. ಬೇಸಿಗೆ ರಜೆ ಇದ್ದ ಕಾರಣ ತಾಯಿಯ ಜೊತೆ ತೋಟದಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಈ ವೇಳೆ ಕೃಷಿ ಹೊಂಡಕ್ಕೆ ಆಳವಡಿಸಿದ್ದ ಪೈಪ್ ಸರಿ ಮಾಡಲು ಹೋಗಿ ಅಕ್ಕ ತಂಗಿ ಇಬ್ಬರು ಕಾಲು ಜಾರಿ ಬಿದ್ದಿದ್ದಾರೆ.
ಮೃತ ರಾಧಾ ಮತ್ತು ಸಾಹಿತೆಗೆ ತಂದೆ ಇರಲಿಲ್ಲ. ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಕಣ್ಣೀರಿಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.