ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮ್ಯಾಕ್ಸ್ ಮೂಲಕ ಮ್ಯಾಕ್ಸಿಮ್ ಎಂಟರ್ ಟೈನ್ಮೆಂಟ್ ಕೊಟ್ಟಿದ್ದ ಕಿಚ್ಚ ಈಗ ಬಿಲ್ಲ ರಂಗ ಭಾಷಾ ಅವತಾರವೆತ್ತಿದ್ದಾರೆ. ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಟ್ಮೇಲೆ ಸೈಲೆಂಟ್ ಆಗಿದ್ದ ಸುದೀಪ್ ಮಾರ್ಚ್ ಎರಡನೇ ವಾರದಿಂದ ಶೂಟಿಂಗ್ ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದರು. ಆದರೆ ಬಿಲ್ಲ ರಂಗ ಭಾಷಾ ಅಂಗಳಕ್ಕೆ ಕಿಚ್ಚ ಇಳಿದೇ ಇಲ್ಲ. ಹೀಗಾಗಿ ಫ್ಯಾನ್ಸ್ ಯಾವಾಗಿನಿಂದ ಶೂಟಿಂಗ್ ಶುರು? ಅಪ್ ಡೇಟ್ ಕೊಡಿ ಅಂತಾ ನಿರ್ದೇಶಕರ ಹಿಂದೆ ಬಿದ್ದಿದ್ದಾರೆ. ಅಭಿಮಾನಿಗಳ ಕಾತರಕ್ಕೆ ಕಿಚ್ಚನ ತೆರೆ ಎಳೆದಿದ್ದಾರೆ.ಬಿಲ್ಲ ರಂಗ ಭಾಷಾ ಸಿನಿಮಾದ ಚಿತ್ರೀಕರಣ ಏಪ್ರಿಲ್ 16ರಂದು ಶುರುವಾಗಲಿದೆ. ಹಾಗಂತ ಕಿಚ್ಚ ಹೇಳಿಲ್ಲ. ಆದರೆ ಏಪ್ರಿಲ್ 16 ಅಂತಾ ಖಡಕ್ ಆಗಿರುವ ಎರಡು ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ದೇಹ ಹುರಿಗೊಳಿಸಿ, ಸಿಕ್ಸ್ ಪ್ಯಾಕ್ ಅವತಾರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಮಾಣಿಕ್ಯ ಜಬರ್ದಸ್ತ್ ಫೋಟೋ ನೋಡಿ ಸುದೀಪಿಯನ್ಸ್ ಥ್ರಿಲ್ ಆಗಿದ್ದು, ಬಂದ ನೋಡು ಬಿಲ್ಲ ರಂಗ ಭಾಷಾ ಎನ್ನುತ್ತಿದ್ದಾರೆ.
ಕಿಚ್ಚನಿಗೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಬಿಲ್ಲ ರಂಗ ಭಾಷಾ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಪ್ರೈಂ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ನಿರಂಜನ್ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಈ ಬ್ಯಾನರ್ ನಡಿ ಮೂಡಿಬಂದಿದ್ದ ‘ಹನುಮಾನ್’ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಬಿಲ್ಲ ರಂಗ ಭಾಷಾ ತಯಾರಾಗಲಿದೆ.