ಬೆಂಗಳೂರು: ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನಾಲ್ಕೈದು ಪೀಸ್ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!
ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ 2 ದಿನದ ಇಂಗುಗುಂಡಿ ಸ್ಚಚ್ಛ ಮಾಡುವಾಗ ಅಸ್ಥಿಪಂಜರ ಪತ್ತೆಯಾಗಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಬೇಗೂರು ಪೊಲೀಸರು, ಪರಿಶೀಲನೆ ಮಾಡಿ ಅಸ್ಥಿಪಂಜರ ಪೀಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಪತ್ತೆಯಾದ ಅಸ್ಥಿಪಂಜರ ಪೀಸ್ ಗಳನ್ನು FSLಗೆ ರವಾನೆ ಮಾಡಲಾಗಿದೆ.
ಅಸ್ಥಿಪಂಜರ ಮನುಷ್ಯರದ್ದಾ..? ಪ್ರಾಣಿಯದ್ದ ಎಂದು ಪರಿಶೀಲನೆ ಮಾಡಲಾಗುತ್ತಿದ್ದು, ಯುಡಿಆರ್ ದಾಖಲಿಸಿ ಬೇಗೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.