Close Menu
Ain Live News
    Facebook X (Twitter) Instagram YouTube
    Sunday, May 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Benefits of Salt Water Bath: ಬಿಸಿ ನೀರು ಬಿಟ್ಟಾಕಿ, ಉಪ್ಪು ನೀರಲ್ಲಿ ಸ್ನಾನ ಮಾಡಿ..! ಸಿಗಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು

    By Author AINMay 17, 2025
    Share
    Facebook Twitter LinkedIn Pinterest Email
    Demo

    ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ” ಎಂಬುದು ಎಲ್ಲರಿಗು ಗೊತ್ತಿರುವ ಗಾದೆ. ಉಪ್ಪಿಲ್ಲದೆ ಊಟ ತಯಾರಿಸಲು ಅಸಾಧ್ಯ. ಷಡ್ರಸಗಳಲ್ಲಿ ಲವಣಕ್ಕೆ (ಉಪ್ಪು) ಹೆಚ್ಚಿನ ಮಹತ್ವ. ಉಪ್ಪನ್ನು ಹೀಗೆ ಬರೀ ಊಟಕ್ಕೆ ಮಾತ್ರ ಬಳಸುತ್ತಾರೆ ಎಂದರೆ ತಪ್ಪಾಗುತ್ತದೆ. ಇದರ ಹೊರತಾಗಿ ಇದನ್ನು ಮೂಲಿಕೆಯಾಗಿ ಮತ್ತು ನಂಜು ನಿವಾರಕವನ್ನಾಗಿ ಬಳಸುತ್ತಾರೆ. ಉಪ್ಪನ್ನು ಸ್ನಾನ ಮಾಡಲು ಸಹ ಬಳಸುತ್ತಾರೆ. ಬಾತ್ ಸಾಲ್ಟ್ ಎಂಬ ಹೆಸರಿನಲ್ಲಿ ಇದು ದೊರೆಯುತ್ತದೆ. ಉಪ್ಪು ನೀರಿನ ಸ್ನಾನದಿಂದ ಹಲವಾರು ಪ್ರಯೋಜನಗಳು ನಮಗೆ ಲಭಿಸುತ್ತವೆ.

    ಚರ್ಮಕ್ಕೆ ಒಳ್ಳೆಯದು:

    ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದಲ್ಲಿ ಅಡಗಿರುವ ಕೊಳೆ ಸ್ವಚ್ಛವಾಗುತ್ತದೆ. ಅಲ್ಲದೆ ಇದು ಸತ್ತ ಜೀವಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಬೇಸಿಗೆಯಲ್ಲಿ ಬೆವರಿನಿಂದ ಉಂಟಾಗುವ ರಿಂಗ್‌ವರ್ಮ್‌, ತುರಿಕೆ ಇತ್ಯಾದಿ ಚರ್ಮದ ಸೋಂಕುಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮವನ್ನು ಕಾಂತಿಯುತವಾಗಿಸಲು ಸಹಕಾರಿ. ಅಷ್ಟೇ ಅಲ್ಲದೆ ಕಲ್ಲುಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

    ಕೀಲು ನೋವಿನಿಂದ ಪರಿಹಾರ:

    ಪ್ರತಿದಿನ ಓಡಾಟದ ಸಂದರ್ಭದಲ್ಲಿ ದೇಹದಲ್ಲಿ ನೋವು ಕಾಣಿಸಿಕೊಂಡರೆ, ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ಸ್ನಾನ ಮಾಡಬೇಕು. ಇದು ನೋವನ್ನು ನಿವಾರಿಸಲು, ಕೀಲು ನೋವು, ಮೊಣಕಾಲು ಮತ್ತು ಬೆನ್ನು ನೋವಿನಿಂದಲೂ ಪರಿಹಾರ ನೀಡುತ್ತದೆ. ಬೆಚ್ಚಗಿನ ನೀರಿಗೆ ಕಲ್ಲುಪ್ಪು ಸೇರಿಸಿ ಸ್ನಾನ ಮಾಡುವುದರಿಂದ ಊತ ಸಹ ಕಡಿಮೆಯಾಗುತ್ತದೆ.

    ಒತ್ತಡವನ್ನು ದೂರ ಮಾಡುತ್ತದೆ:

    ಪ್ರತಿದಿನ ಸ್ನಾನದ ನೀರಿಗೆ ಉಪ್ಪು ಬೆರೆಸಿ  ಸ್ನಾನ ಮಾಡುವುದರಿಂದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಇದು ಆಯಾಸವನ್ನು ನಿವಾರಿಸುವುದರ ಜೊತೆಗೆ ದೇಹಕ್ಕೆ ಉಲ್ಲಾಸವನ್ನು ಒದಗಿಸುತ್ತದೆ.

    ದೇಹವನ್ನು ನಿರ್ವಿಷಗೊಳಿಸುತ್ತದೆ:

    ಕಲ್ಲುಪ್ಪು ಬೇರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಅದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿ ಸುಡುವ ಸಂವೇದನೆ, ತುರಿಕೆ ಮತ್ತು ಊತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

    ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಹಕಾರಿ:

    ಉಪ್ಪು ಉತ್ತಮ ಶುದ್ಧೀಕರಣ ಗುಣಗಳನ್ನು ಹೊಂದಿರುವುದರಿಂದ ಸ್ನಾನದ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ ಸ್ನಾನ ಮಾಡುವುದರಿಂದ ದೇಹದಿಂದ ನಕಾರಾತ್ಮಕ ಶಕ್ತಿ ಮತ್ತು ಕಲ್ಮಶಗಳನ್ನು ತೆಗೆದು ಹಾಕಬಹುದು.

    ಸ್ನಾನಕ್ಕೆ ಉಪ್ಪುನೀರನ್ನು ತಯಾರಿಸುವುದುಹೇಗೆ:

    ಮೊದಲು ಒಂದು ಬಕೆಟ್ ತೆಗೆದುಕೊಂಡು ಅದಕ್ಕೆ ನೀರು ತುಂಬಿಸಿ. ಈ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನಲ್ಲಿ ಉಪ್ಪು ಬೆರೆತ ನಂತರ ಸ್ನಾನ ಮಾಡಿ. ಉಪ್ಪು ನೀರಿನಿಂದ ಸ್ನಾನ ಮಾಡುವುದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿ ಹಾಗೆಯೇ ಇದರಿಂದ ನಕಾರಾತ್ಮಕ ಶಕ್ತಿಯನ್ನು ಕೂಡ ದೂರ ಮಾಡಬಹುದು.

     

    Post Views: 8

    Demo
    Share. Facebook Twitter LinkedIn Email WhatsApp

    Related Posts

    ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹ ಆಗಿದ್ಯಾ!? ನಿತ್ಯ ಈ ಗಿಡಮೂಲಿಕೆ ಚಹಾ ಕುಡಿಯಿರಿ!

    May 17, 2025

    ಕಬ್ಬಿನ ಹಾಲು ಕುಡಿದಾಕ್ಷಣ ಈ ಆಹಾರಗಳನ್ನು ತಿನ್ನಲೇಬಾರದಂತೆ! ಯಾಕೆ?

    May 17, 2025

    ಶುಗರ್ ಸಮಸ್ಯೆನಾ ಅಥವಾ ತೂಕ ಇಳಿಸಬೇಕಾ? ತೊಂಡೆಕಾಯಿ ತಿನ್ನಿ ಸಾಕು ರಿಸಲ್ಟ್ ಪಕ್ಕಾ..

    May 17, 2025

    ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ರೆ ಏನರ್ಥ!? ಜ್ಯೋತಿಷ್ಯ ಹೇಳುವುದು ಹೀಗೆ!

    May 16, 2025

    ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ

    May 16, 2025

    Dark Spot Remedy: ಮುಖದ ಮೇಲಿನ ಕಪ್ಪು ಕಲೆ ಮುಜುಗರ ಉಂಟು ಮಾಡ್ತಿದ್ರೆ ಇಲ್ಲಿದೆ ಸೂಪರ್‌ ಟಿಪ್ಸ್..!‌

    May 16, 2025

    ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಸಿಂಪಲ್ ಮನೆಮದ್ದು ಬಳಸಿ!

    May 16, 2025

    ನಿಮ್ಮ ಮನೆಯಲ್ಲೂ ಇಲಿಗಳ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಹೀಗೆ ಮಾಡಿ ಓಡ್ಸಿ!

    May 16, 2025

    ತುಂಬಾ ದಪ್ಪಗಿದ್ದೀನಿ ಅಂತ ಚಿಂತೆ ಕಾಡ್ತಿದ್ಯಾ!? ಈ ಬಗೆಯ ಹಣ್ಣುಗಳನ್ನು ಜಾಸ್ತಿ ತಿನ್ನಬೇಡಿ!

    May 15, 2025

    ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!

    May 15, 2025

    ಮಾವಿನ ಹಣ್ಣು ತಿಂದು ಸಿಪ್ಪೆ ಎಸೆಯುತ್ತೀರಾ!? ಹಾಗಿದ್ರೆ ಈ ಸ್ಟೋರಿ ನೋಡಿ!

    May 15, 2025

    ಮೊಸರು ತಿಂದಾಕ್ಷಣ ನೀರು ಕುಡಿಯಬಾರದು ಯಾಕೆ!? ಇದು ನಿಮಗಿದು ಗೊತ್ತಾ!?

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.