ನಾವು ನಿದ್ದೆಗೆ ಜಾರಿದಾಗ ಕೆಲವೊಮ್ಮೆ ಕೆಲವೊಂದು ದೃಶ್ಯಗಳು ಕಣ್ಣಿಗೆ ಕಟ್ಟುತ್ತದೆ. ಕೆಲವೊಮ್ಮೆ ಈ ಘಟನೆಗಳು ಭವಿಷ್ಯದಲ್ಲಿ ನಿಜವಾದರೆ, ಇನ್ನು ಕೆಲವು ಕನಸಾಗಿಯೇ ಉಳಿದು ಬಿಡುತ್ತದೆ. ನಿದ್ದೆಯಿಂದ ಎದ್ದಾಕ್ಷಣ ನಾವು ಕಂಡ ಕನಸುಗಳ ಬಗ್ಗೆ ಯೋಚಿಸಬೇಕು. ಆ ಕನಸು ನಮಗೆ ಏನನ್ನು ಸೂಚಿಸುತ್ತದೆ ಎಂಬೂದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ಕನಸುಗಳು ತಿಳಿಸುತ್ತದೆ ಎಂಬ ನಂಬಿಕೆಯಿದೆ.
ನಿಮ್ಮ ಮುಂದೆ ಅಥವಾ ನಿಮ್ಮ ಕನಸಿನಲ್ಲಿ ನಾಯಿ, ಹಾವು ಅಥವಾ ಕಾಗೆ ಬಂದು ಕೆಲ ಸೂಚನೆ ಕೊಡ್ತಾವಂತೆ. ಇವು ಮುಂಬರುವ ಅಪಾಯದ ಬಗ್ಗೆ ಹೇಗೆ ಎಚ್ಚರಿಸುತ್ತವೆ ಗೊತ್ತಾ?
ಕೆಟ್ಟ ಸಮಯಗಳು ಹತ್ತಿರ ಬಂದಾಗ, ಪ್ರಾಣಿಗಳು, ಪಕ್ಷಿಗಳು ಮತ್ತು ಕನಸುಗಳ ಮೂಲಕ ನಮಗೆ ಎಚ್ಚರಿಕೆಗಳು ಕೊಡುತ್ತೆ ಎನ್ನಲಾಗುತ್ತೆ. ಖ್ಯಾತ ಜ್ಯೋತಿಷಿ ಆಚಾರ್ಯ ಸಂತೋಷ್ ಕುಮಾರ್ ಚೌಬೆ ಅವರ ಪ್ರಕಾರ, ನಾಯಿಗಳು, ಹಾವುಗಳು ಮತ್ತು ಕಾಗೆಗಳಂತಹ ಪ್ರಾಣಿಗಳು ಮತ್ತು ಪಕ್ಷಿಗಳು ಕೆಟ್ಟ ಶಕುನಗಳನ್ನು ನೀಡುತ್ತವಂತೆ. ಈ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸಮಯಕ್ಕೆ ತಕ್ಕ ಕ್ರಮಗಳನ್ನು ತೆಗೆದುಕೊಂಡು, ತೊಂದರೆಗಳನ್ನ ಕಡಿಮೆ ಮಾಡಬಹುದು. ಈ ಚಿಹ್ನೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಪ್ರಕೃತಿ ಕೆಟ್ಟ ಸಮಯದ ಸೂಚನೆಗಳನ್ನು ನೀಡುತ್ತದೆ: ಜ್ಯೋತಿಷ್ಯದ ಪ್ರಕಾರ, ಸಮಯ ಬದಲಾಗುವ ಮೊದಲು ಪ್ರಕೃತಿ ವಿವಿಧ ರೀತಿಯಲ್ಲಿ ಸೂಚನೆಗಳನ್ನ ನೀಡುತ್ತದೆ. ಈ ಚಿಹ್ನೆಗಳು ಪ್ರಾಣಿಗಳು, ಪಕ್ಷಿಗಳು ಅಥವಾ ಕನಸುಗಳ ಮೂಲಕ ಬರುತ್ತವೆ. ಈ ಚಿಹ್ನೆಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಮುಂಬರುವ ದೊಡ್ಡ ಬದಲಾವಣೆಗಳ ಸುಳಿವು ಪಡೆಯಬಹುದಾಗಿದೆ. ಆದರೆ, ನಾವು ಈ ಚಿಹ್ನೆಗಳನ್ನು ಅಜ್ಞಾನ ಅಥವಾ ಮೌಡ್ಯ ಎನ್ನುತ್ತಾ ನಿರ್ಲಕ್ಷಿಸುತ್ತೇವೆ. ಕೆಟ್ಟ ಕಾಲ ಆರಂಭವಾಗುವ ಈ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಆಚಾರ್ಯ ಸಂತೋಷ್ ಕುಮಾರ್ ಚೌಬೆ ಹೇಳುತ್ತಾರೆ.
ನಾಯಿ: ರಾತ್ರಿಯಲ್ಲಿ ಅಳುವುದು ಕೂಡ ಒಂದು ಎಚ್ಚರಿಕೆ ಆಗಿದೆ. ನಾಯಿಯು ಪ್ರಕೃತಿಯ ಲಕ್ಷಣಗಳನ್ನು ಚೆನ್ನಾಗಿ ತೋರಿಸುವ ಪ್ರಾಣಿಗಳಲ್ಲಿ ಒಂದಾಗಿದೆ. ನಿಮ್ಮ ಮನೆಯ ಗೇಟಿನ ಮುಂದೆ ಪ್ರತಿ ರಾತ್ರಿ ನಾಯಿ ಕೂಗಲು ಪ್ರಾರಂಭಿಸಿದ್ರೆ. ಇದು ಒಂದು, ಎರಡು ಅಥವಾ ಮೂರು ತಿಂಗಳುಗಳವರೆಗೆ ನಿರಂತರವಾಗಿ ಮುಂದುವರಿದರೆ, ಅದು ಕೆಟ್ಟ ಸಮಯದ ಬಲವಾದ ಸಂಕೇತವೇ ಆಗಿರುತ್ತೆ.
ನಿಮ್ಮ ಕಾಲೋನಿಯಲ್ಲಿ ಅನೇಕ ಮನೆಗಳಿದ್ದು, ನಿಮ್ಮ ಗೇಟಿನ ಮುಂದೆಯೇ ನಾಯಿ ಕೂಗುತ್ತಿದ್ದರೆ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರ್ಥಿಕ ಬಿಕ್ಕಟ್ಟು, ವೈವಾಹಿಕ ತೊಂದರೆ, ಮೋಸ ಅಥವಾ ಯಾವುದೇ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಅಂತಹ ಸಮಯದಲ್ಲಿ, ಜ್ಯೋತಿಷಿಯ ಸಲಹೆಯನ್ನು ಪಡೆದು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ.
ಕಾಗೆ: ತಲೆಯ ಮೇಲೆ ಕುಳಿತುಕೊಳ್ಳುವುದು ಅಪಾಯದ ಸಂಕೇತ, ಕಾಗೆ ಪ್ರಕೃತಿಯ ಪ್ರಮುಖ ಸಂದೇಶ ವಾಹಕಗಳಲ್ಲಿ ಒಂದಾಗಿದೆ. ಕಪ್ಪು ಕಾಗೆ ಆಗಾಗ್ಗೆ ನಿಮ್ಮ ತಲೆ ಅಥವಾ ಭುಜದ ಮೇಲೆ ಕುಳಿತರೆ ಅಥವಾ ಅದರ ಕೊಕ್ಕಿನಿಂದ ನಿಮ್ಮನ್ನು ಚುಚ್ಚಿದರೆ, ಅದು ಅಪಾಯದ ಸಂಕೇತವಾಗಿರಬಹುದು. ಕಾಗೆಯನ್ನು ಕನಸಿನಲ್ಲಿ ಕಂಡ್ರು ಅಪಾಯವೇ ಎನ್ನುತ್ತಾರೆ ಜ್ಯೋತಿಷಿಗಳು.
ಅಂತಹ ಘಟನೆಗಳು ಒಂದಕ್ಕಿಂತ ಹೆಚ್ಚು ಬಾರಿ ಸಂಭವಿಸಿದಲ್ಲಿ ನಿರ್ಲಕ್ಷಿಸಬಾರದು. ಅಂತಹ ಚಿಹ್ನೆಗಳು ಕಾಣಿಸಿಕೊಂಡರೆ, ನೀವು ನಿಮ್ಮ ಜಾತಕವನ್ನು ವಿಶ್ಲೇಷಿಸಿ ಜ್ಯೋತಿಷ್ಯದ ಪ್ರಕಾರ ಪರಿಹಾರಗಳನ್ನು ತೆಗೆದುಕೊಳ್ಳಬೇಕು. ಈ ಪರಿಹಾರಗಳಲ್ಲಿ ಗ್ರಹಗಳ ಶಾಂತಿಗಾಗಿ ಪೂಜೆ, ದಾನ ಅಥವಾ ಹೋಮ ಮಾಡಿಸಬಹುದು.
ಸರ್ಪ ರಾಶಿಗಳು: ಜ್ಯೋತಿಷ್ಯದಲ್ಲಿ ಸರ್ಪವು, ರಾಹು ಮತ್ತು ಕೇತು ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ನೀವು ರಸ್ತೆಯಲ್ಲಿ ಆಗಾಗ್ಗೆ ಹಾವುಗಳನ್ನು ನೋಡಿದರೆ ಅಥವಾ ನಿಮ್ಮ ಕನಸಿನಲ್ಲಿ ಹಾವುಗಳು ನಿಮ್ಮನ್ನು ಬೆನ್ನಟ್ಟಿದರೆ ಅಥವಾ ಕಚ್ಚಿದರೆ, ಇದು ಕೆಟ್ಟ ಸಮಯದ ಸೂಚನೆ ಎಂದು ಹೇಳಲಾಗುತ್ತದೆ.
ಹಾವಿನ ಅಂತಹ ಚಿಹ್ನೆಗಳು ಆರ್ಥಿಕ ನಷ್ಟ, ಕೌಟುಂಬಿಕ ಕಲಹ, ಆರೋಗ್ಯ ಸಮಸ್ಯೆಗಳು ಅಥವಾ ಇತರ ಪ್ರಮುಖ ತೊಂದರೆಗಳ ಸೂಚನೆಯಾಗಿರಬಹುದು.