ಕಲಬುರಗಿ: ಭಾರತ, ಪಾಕ್ ಸಂಘರ್ಷದ ಮಧ್ಯೆ ನಿನ್ನೆ ಕದನ ವಿರಾಮ ಹೊಸ ತಿರುವು ನೀಡಿತ್ತು. ಆದರೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ ಬಳಿಕ ಭಾರತೀಯ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಈ ಬಗ್ಗೆ ಭಾರತೀಯ ವಾಯು ಸೇನೆ ಅಧಿಕೃತ ಮಾಹಿತಿ ನೀಡಿದೆ. ಆದ್ದರಿಂದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಔಸೆ ಪತ್ನಿಗೆ ಹೆರಿಗೆ ಹಿನ್ನೆಲೆ ಸ್ವಗ್ರಾಮಕ್ಕೆ ಬಂದಿದ್ದರು.
20 ವರ್ಷದಿಂದ ಸಿಆರ್ಪಿಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಹಣಮಂತರಾಯ್, ಪ್ರಸಕ್ತ ಶ್ರೀನಗರದಲ್ಲಿ ಸೇವೆಯಲ್ಲಿದ್ದಾರೆ. 1 ತಿಂಗಳು ರಜೆ ಪಡೆದು ಏ.25ರಂದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ಗಂಡು ಮಗು ಜನಿಸಿದ ಒಂದು ವಾರದಲ್ಲೇ ಕರ್ತವ್ಯಕ್ಕೆ ತೆರಳಿದ್ದು, ಕಲಬುರಗಿ ನಿಲ್ದಾಣದಲ್ಲಿ ಹಣಮಂತರಾಯ್ಗೆ ಕುಟುಂಬಸ್ಥರು ಬಿಳ್ಕೋಟ್ಟಿದೆ.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ಅದೇ ರೀತಿಯಾಗಿ ವಿಜಯಪುರ ಬಿಲ್ಲೆಯ ಬಬಲೇಶ್ವರ ತಾಲೂಕಿನ ಬಿಎಸ್ಎಫ್ ಯೋಧ ಸಿದ್ದಪ್ಪ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ. ಸೇನೆಯ ತುರ್ತು ಕರೆಯ ಮೇರೆಗೆ ಕಲಬುರಗಿ ರೈಲು ನಿಲ್ದಾಣದದಿಂದ ಹೈದ್ರಾಬಾದ್ಗೆ ತೆರಳಿದ್ದು, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.