ಬೆಂಗಳೂರು:- ಕನ್ನಡ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಕಾಮಿಡಿ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಟ ಮಡೆನೂರು ಮನು ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ದೂರಿನ ಅನ್ವಯ ಈಗಾಗಲೇ ಮನು ಬಂಧಿಸಿರುವ ಬೆಂಗಳೂರಿನ ಅನ್ನಪೂರ್ಣೆಶ್ವರಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Crime News: ಚೂರಿಯಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ.. ಆರೋಪಿ ಎಸ್ಕೇಪ್!
ಈಗಾಗ್ಲೆ ಸಂತ್ರಸ್ತ ನಟಿಗೆ ಮೆಡಿಕಲ್ ಮುಗಿಸಿದ್ದು, ಇಂದು ಹೇಳಿಕೆ ದಾಖಲಿಸಲು ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ರಿಲೀಸ್ಗೂ ಮುನ್ನವೇ ಬಂಧನವಾಗಿರೋದ್ರಿಂದ ಮಡೆನೂರ್ ಮನು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ತಿಳಿದುಬಂದಿದೆ
ಸದ್ಯ ನಟ ಮಡೆನೂರು ಮನು ವಿಚಾರಣೆ ಕೂಡ ನಡೆದಿದೆ. ಇಂದು ಆರೋಪಿಯ ಮೆಡಿಕಲ್ ಟೆಸ್ಟ್ ಮುಗಿಸಿ ಆ ಬಳಿಕ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಆ ಬಳಿಕ ಕಸ್ಟಡಿಗೆ ಪಡೆದು ಸಂತ್ರಸ್ಥೆ ನಟಿ ಕೊಟ್ಟಿರೋ ಹೇಳಿಕೆ ಆಧರಿಸಿ ವಿಚಾರಣೆ ನಡೆಸಲಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸ್ರು ಇಂದು ಸಂತ್ರಸ್ತೆ ಹಾಗೂ ಆರೋಪಿಯ ವಿಚಾರಣೆ ನಡೆಸಲಿದ್ದಾರೆ.
ಇನ್ನೂ ಅತ್ಯಾಚಾರ ಪ್ರಕರಣ ಬಗ್ಗೆ ಮಾಡೆನೂರು ಮನು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗ್ತಿದೆ. ಆಕೆ ಜೊತೆ ಆತ್ಮೀಯತೆಯಿಂದ ಸಂಪರ್ಕದಲ್ಲಿದ್ದಿದ್ದು ನಿಜ, ಆದ್ರೆ ನಾನು ಆಕೆಗೆ ತಾಳಿ ಕಟ್ಟಿಲ್ಲ, ಮದುವೆಯಾಗಿಲ್ಲ. ನನಗೆ ಸಂತ್ರಸ್ತೆಗೂ ಪರಿಚಯವಿದೆ. ಆಕೆಯೇ ಅತ್ಯಾಚಾರದ ದೂರು ಕೊಟ್ಟಿರೋದು. ಆಕೆ ದೂರಿನಲ್ಲಿ ಹೇಳಿರೋದು ಬಹುತೇಕ ಸುಳ್ಳು ಎಂದು ಮಡೆನೂರ್ ಮನು ಹೇಳಿದ್ದಾರೆ ಎನ್ನಲಾಗ್ತಿದೆ