Close Menu
Ain Live News
    Facebook X (Twitter) Instagram YouTube
    Thursday, June 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇದೊಂದು ಬಾರಿ ಕ್ಷಮಿಸಿ: ಅಭಿಮಾನಿಗಳ ಬಳಿ ಕೈ ಮುಗಿದು ಬೇಡಿಕೊಂಡ ದರ್ಶನ್

    By Author AINFebruary 8, 2025
    Share
    Facebook Twitter LinkedIn Pinterest Email
    Demo

    ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಹುಟ್ಟುಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ನೆಚ್ಚಿನ ನಟನ ಬರ್ತಡೇಯನ್ನು ಅದ್ದೂರಿಯಾಗಿ ಸೆಲೆಬ್ರೇಟ್‌ ಮಾಡಬೇಕು ಎಂದು ಅಂದುಕೊಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. 

    ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ, ಥ್ಯಾಂಕ್ಸ್ ಹೇಳೋದಾ ನೀವೆಲ್ಲರೂ ಕೊಟ್ಟಿರುವ ಪ್ರೀತಿಗೆ ಏನು ಹೇಳಿದ್ರೂ ಕಮ್ಮಿನೇ. ಅದನ್ನು ಹೇಗೆ ಹಿಂದಿರುಗಿಸಿ ಕೊಡೋದು ನನಗೆ ಗೊತ್ತಾಗುತ್ತಿಲ್ಲ. ಆದರೆ ಇದೇ ಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರಿಗೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಅಂತ ಆಸೆ ಇತ್ತು. ನನ್ನ ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಹಾಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂತ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ.

    ನಿಂತುಕೊಂಡು ಎಲ್ಲರಿಗೂ ವಿಶ್ ಮಾಡೋಕೆ ನನ್ನ ಕೈಯಲ್ಲಿ ಆಗಲ್ಲ. ಒಂದು ಇಂಜೆಕ್ಷನ್ ತೆಗೆದುಕೊಂಡಾಗ ಒಂದು 15ರಿಂದ 20 ದಿನ ಆರಾಮ ಆಗಿರುತ್ತೇನೆ. ಅದರ ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಶುರುವಾಗುತ್ತದೆ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುಟ್ಟಿ. ಅದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು ನಾನು. ಈಗ ಇರೋ ಕೆಲಸಗಳಲ್ಲಿ ಈಗಾಗಲೇ ಒಪ್ಪಿಕೊಂಡಿರೋದನ್ನು ಮಾಡಬೇಕಿದೆ. ನನ್ನ ನಿರ್ಮಾಪಕರಿಗೆ ಥ್ಯಾಂಕ್ಯೂ ಹೇಳ್ತೀನಿ. ಯಾಕೆಂದರೆ ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ನಾನು ಅನ್ಯಾಯ ಮಾಡಬಾರದು ಅಂತ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡ್ತಾ ಇದ್ದೀನಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಎಂದು ನಟ ಮನವಿ ಮಾಡಿದ್ದಾರೆ.

    ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ ಎಂದು ದರ್ಶನ್‌ ಹೇಳಿದ್ದಾರೆ.

    ಅದಷ್ಟೇ ಅಲ್ಲ, ಮುಂದೆ ನಾನು ಪ್ರೇಮ್ ಒಟ್ಟಾಗಿ ಸಿನಿಮಾ ಮಾಡೇ ಮಾಡುತ್ತೇವೆ. ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆಯ ಆಸೆ ಅದು. ಕೆವಿಎನ್ ಪ್ರೊಡಕ್ಷನ್‌ನವರು ಅವರು ಬೇರೆ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದು ಪ್ರೊಡಕ್ಷನ್ ಅಂದಾಗ ಅವರಿಗೂ ಕಷ್ಟ ಆಗುತ್ತೆ. ಅದಕ್ಕೆ ಯಾರು ಯಾವುದೇ ಪ್ರೊಡಕ್ಷನ್ ಇಲ್ಲದೇ ಸುಮ್ಮನೆ ಇರತಾರಲ್ಲ ಅವರಿಗೆ ಅವಕಾಶ ಕೊಡೋಣ ಅಂತ ಎಂದಿದ್ದಾರೆ.

    ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನ ಮೇಲೆ ಇರೋದಕ್ಕೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ಇದನ್ನು ನಾನೆಂದೂ ತೀರಿಸೋಕೆ ಆಗಲ್ಲ ಎಂದಿದ್ದಾರೆ. ಈ ವೇಳೆ, ನಾನು 3 ಜನರಿಗೆ ಥ್ಯಾಂಕ್ಸ್ ಹೇಳಬೇಕು. ಧನ್ವೀರ್ ಯಾವಾಗಲೂ ಪಾಪ ನನ್ನ ಜೊತೆಯಲಿಯೇ ಇರುತ್ತಿದ್ದರು. ನನ್ನ ದೊಡ್ಡ ಬೆಂಬಲವಾಗಿ ನಿಂತರು. ‘ಬುಲ್ ಬುಲ್’ ರಚಿತಾ ರಾಮ್‌ಗೂ ಥ್ಯಾಂಕ್ಯೂ. ನನ್ನ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳು ಧನ್ಯವಾದಗಳು ಎಂದು ದರ್ಶನ್‌ ಹೇಳಿದ್ದಾರೆ.

    ಇದೇ ವೇಳೆ, ಬೇರೆ ಭಾಷೆಯಲ್ಲಿ ಸಿನಿಮಾ ಮಾಡೋ ಬಗ್ಗೆ ದರ್ಶನ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇಲ್ಲಿಯೇ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸಿದ್ದೀರಾ. ಸುಮ್ಮನೆ ಎಲ್ಲಿಗೆ ಅಂತಾ ಹೋಗಲಿ. ಸಾಯೋವರೆಗೂ ಇಲ್ಲಿಯೇ ಇರುತ್ತೇನೆ. ಇಲ್ಲಿ ಬಿಟ್ಟು ನಾನು ಹೋಗೋಕೆ ಆಗೋದಿಲ್ಲ. ಕಾವೇರಿ ಹುಟ್ಟಿರೋದು ಎಲ್ಲಿ ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತು. ನಾನು ಕೂಡ ಇಲ್ಲೇ ಹುಟ್ಟಿರೋದು. ಕಾವೇರಿ ಎಲ್ಲಾ ಕಡೆ ಹರಿದುಕೊಂಡು ಬರುತ್ತಾಳೆ. ಆದರೆ ನನ್ನದು ಮೇಕೇದಾಟು ಮಾತ್ರ ಸೀಮಿತ. ನನ್ನ ಸಿನಿಮಾಳು ಡಬ್ ಆಗಿ ಬೇರೆಕಡೆ ಹೋದರೆ ಅದು ಬೇರೆ ಥರ ಆಗುತ್ತದೆ. ಯಾವಾಗಲೂ ನಾನು ಕನ್ನಡ ಸಿನಿಮಾನೇ ಮಾಡೋದು ಎಂದಿದ್ದಾರೆ.

     

    Demo
    Share. Facebook Twitter LinkedIn Email WhatsApp

    Related Posts

    Israel-Iran Conflict: ಇರಾನ್ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ಆಸ್ಪತ್ರೆ ಧ್ವಂಸ..!..!

    June 19, 2025

    ಹೊಯ್ಸಳ ನಿರ್ದೇಶಕರ ಹೊಸ ಸಾಹಸ..ಹೇಗಿದೆ ʼಆಲ್ಫಾ ಮೆನ್ ಲವ್ ವೈಲೆನ್ಸ್ʼ ಸಿನಿಮಾ ಮೇಕಿಂಗ್‌?

    June 19, 2025

    ಮತ್ತೆ ಒಂದಾಯ್ತು ಟಗರು ಜೋಡಿ..ಶಿವಣ್ಣ-ಡಾಲಿ ಹೊಸ ಸಿನಿಮಾದ ಟೈಟಲ್‌ ರಿವೀಲ್..

    June 19, 2025

    ಲಕ್ಷ-ಲಕ್ಷ ವಂಚನೆ ಕೇಸ್: ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಗೋಲ್ಡ್ ಸುರೇಶ್!

    June 18, 2025

    ಹಿಟ್ ಫಿಲ್ಮ್ ಕೊಡಲಾರದಕ್ಕೆ ಮಲ್ಟಿಪ್ಲೆಕ್ಸ್’ನಿಂದ ಕನ್ನಡ ಸಿನಿಮಾ ತಗಿಯುತ್ತಿದ್ದಾರೆ: ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ

    June 18, 2025

    ರಚಿತಾ ರಾಮ್‌ ವಿರುದ್ಧ ಮತ್ತೊಂದು ಕಂಪ್ಲೇಂಟ್‌..ಏನ್‌ ಮಾಡಿದ್ರು ಡಿಂಪಲ್‌ ಕ್ವೀನ್!?

    June 18, 2025

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್

    June 18, 2025

    Iran Isreal Crisis: ಇಸ್ರೇಲ್ ದಾಳಿಗೆ ತತ್ತರಿಸಿದ ಇರಾನ್: ಮಹಿಳೆಯರು, ಮಕ್ಕಳು ಸೇರಿ 585 ಜನರು ಸಾವು..!

    June 18, 2025

    ಒಂದೇ ಕಾರಿನಲ್ಲಿ ರಶ್ಮಿಕಾ-ವಿಜಯ್‌ ಜಾಲಿ ಜಾಲಿ: ಮಾಸ್ಕ್‌ನಲ್ಲಿ ಮುಖ ಮುಚ್ಚಿಕೊಂಡ ಜೋಡಿ! Video ವೈರಲ್‌!

    June 18, 2025

    ‌Video: ಡಿಬಾಸ್ ಟೆಂಪಲ್‌ ರನ್:‌ ಮಳೆಯಲ್ಲಿಯೇ ಮಹಾದೇವನ ʼದರ್ಶನʼ ಮಾಡಿದ ದಾಸ!

    June 18, 2025

    India – Canada: ರಾಜತಾಂತ್ರಿಕರನ್ನು ಮರು ನಿಯೋಜಿಸಲು ಭಾರತ, ಕೆನಡಾ ಒಪ್ಪಿಗೆ..!

    June 18, 2025

    ಸುದ್ದಿ ಓದುತ್ತಿರುವಾಗಲೇ ಚಾನೆಲ್ ಮೇಲೆ ಇಸ್ರೇಲ್ ದಾಳಿ..! ನೇರ ಪ್ರಸಾರ ಬಿಟ್ಟು ಓಡಿದ ನಿರೂಪಕಿ – ಭಯಾನಕ Video Viral

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.