ಕನ್ನಡದ ಹುಡ್ಗಿ ಶ್ರೀಲೀಲಾ ಈಗ ಪಕ್ಕದ ಟಾಲಿವುಡ್, ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾಳೆ. ಸ್ಟಾರ್ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ಶ್ರೀಲೀಲಾ ಸೋಷಿಯಲ್ ಮೀಡಿಯಾದಲ್ಲಿಯೂ ತುಂಬಾನೇ ಆಕ್ಟೀವ್. ಸದಾ ಚೆಂದದ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಈಗ ಮನೆಗೆ ಹೊಸ ಸದಸ್ಯೆಯನ್ನು ಪ್ರೀತಿಯಿಂದ ಬರ ಮಾಡಿಕೊಂಡಿದ್ದಾರೆ.
ಶ್ರೀಲೀಲಾ ಮಗುವನ್ನು ಪ್ರೀತಿಯಿಂದ ಅಪ್ಪಿಕೊಂಡು ಮುದ್ದಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ “ಮನೆಯಲ್ಲಿ ಹೊಸ ಸದಸ್ಯೆ, ಹೃದಯಗಳನ್ನು ಸೆರೆಹಿಡಿಯುತ್ತಿದ್ದಾರೆ” ಎಂದು ಶೀರ್ಷಿಕೆಯನ್ನು ಬರೆದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಶ್ರೀಲೀಲಾ ಮಕ್ಕಳನ್ನು ದತ್ತು ಪಡೆದಿದ್ದಾರೆ . ಕೇವಲ 21 ನೇ ವಯಸ್ಸಿನಲ್ಲಿ, ಅವರು ಅನಾಥಾಶ್ರಮದಿಂದ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಬೈ ಟು ಲವ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಇಬ್ಬರು ಅನಾಥ ದಿವ್ಯಾಂಗ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದರು. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಅವರು ವಹಿಸಿಕೊಂಡಿದ್ದರು.
ಸಿನಿಮಾ ಜೊತೆಗೆ ಈ ರೀತಿ ಕಾಯಕಗಳ ಮೂಲಕ ಶ್ರೀಲೀಲಾ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಸದ್ಯ ಕಾರ್ತಿಕ್ ಆರ್ಯನ್ ಜೊತೆ ಆಶಿಕಿ 3 ಸಿನಿಮಾದಲ್ಲಿ ಈ ಭರಾಟೆ ಹುಡುಗಿ ಬ್ಯುಸಿಯಾಗಿದ್ದಾಳೆ.