ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಗಾಂಧಿನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಶ್ರೀ ಗಜಾನನ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು ಭಕ್ತರ ಆರಾಧ್ಯ ಕೇಂದ್ರ ಆಗಿವೆ. ಒಂದೇ ಆವರಣದಲ್ಲಿ ಈ ದೇವಸ್ಥಾನಗಳಿದ್ದು ಬೇಡಿದವರಿಗೆ ಬೇಡಿದನ್ನ ಕೊಡುವ ದೈವಿ ಪುರುಷರಾಗಿದ್ದರೆ.ಇಂದು ಈ ದೇವಸ್ಥಾನದ ಸಕಲ ಭಕ್ತರ ಆರಾಧ್ಯ ಕೇಂದ್ರ ಆಗಿದೆ. ಆರಂಭದಲ್ಲಿಗಾಂಧಿನಗರದಲ್ಲಿ ಖಾಲಿ ಜಾಗೆ ಇತ್ತುಸ್ಥಳೀಯರು ಸೇರಿಕೊಂಡು ಮಹಿಳಾ ಸಂಘ ಹಾಗೂ ಗುರುಹಿರಿಯರು ಜೊತೆಯಲ್ಲಿ ಸಾಮಾಜ ಮುಖಿಯಾಗಿ ಚಟುವಟಿಕೆಗಳನ್ನ ನಡೆಸಿಕೊಂಡು ಹೋಗತಾ ಇದ್ದರು. ನಂತರ ಇದೇ ಜಾಗೆಯಲ್ಲಿ ಒಂದು ಧಾರ್ಮಿಕ ಕೇಂದ್ರ ಆಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಕೇಲವರ ವಿರೋಧದ ನಡುವೆ ದೊಡ್ಡ ಮಟ್ಟದ ಧಾರ್ಮಿಕ ಕೇಂದ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳಲಾಯಿತು.
Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು!
ಸ್ಥಳೀಯ ನಾಯಕರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಗಣಪತಿ ದೇವಸ್ಥಾನ ನಿರ್ಮಾಣದ ಸಂಕಲ್ಪದೊಂದಿಗೆ ಆರಂಭ ಆಯಿತು. ಕೇವಲ ಗಾಂಧಿನಗರ ಅಷ್ಟೇ ಅಲ್ಲ ಹುಬ್ಬಳ್ಳಿ ಧಾರವಾಡ ಸೇರಿದಂತೆ ಸುತ್ತಲಿನ ಭಕ್ತರು ಆಗಮಿಸಲು ಆರಂಭಿಸಿದರು. 1996 ರಲ್ಲಿ ಶ್ರಿ ಬಲಮುರಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಬಲಮುರಿ ಗಣೇಶನ ವಿಗ್ರಹ ಪ್ರತಿಷ್ಟಾಪನೆ ಅತ್ಯಂತ ವಿಜೃಂಭಣೆಯಿಂದ ಸಹ ನಡೆಸಲಾಯಿತು.
ಈ ದೇವಸ್ಥಾನ ಮನೆಗೆ ಶಕ್ತಿ, ಧೈರ್ಯ, ಜ್ಞಾನ, ಬುದ್ಧಿವಂತಿಕೆ, ವಿಜಯ ಮತ್ತು ರಕ್ಷಣೆಯನ್ನು ನೀಡುತ್ತದೆ. ಇದಲ್ಲದೆ, ಇದು ಅಡೆತಡೆಗಳನ್ನು ನಿವಾರಿಸುತ್ತದೆ, ಶತ್ರುಗಳ ಮೇಲೆ ಜಯವನ್ನು ನೀಡುತ್ತದೆ, ತಂತ್ರ-ಮಂತ್ರದಲ್ಲಿ ಯಶಸ್ಸು, ರೋಗಗಳಿಂದ ಮುಕ್ತಿ ಮತ್ತು ಉದ್ಯೋಗದಲ್ಲಿ ಯಶಸ್ಸನ್ನು ಕರುಣಿಸುವ ಆರಾಧ್ಯ ದೈವ ಆಗಿದ್ದಾನೆ. ನಂತರ ಬಂದ ಅನೇಕ ಅಡೆತಡೆಗಳನ್ನ ನಿವಾರಣೆ ಮಾಡಿ ಭಕ್ತರು ದಿನೇ ದಿನೇ ಹೆಚ್ಚಾದರು.
ಇದೇ ದೇವಸ್ಥಾನದ ಆವರಣದಲ್ಲಿ ಇನ್ನೊಂದು ದೇವಸ್ಥಾನ ನಿರ್ಮಾಣ ಆಗಲಿ ಎಂಬುದು ಭಕ್ತರ ಆಶಯ ಆಗಿತ್ತು. ಅದರಂತೆ 2003 ರಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಹ ನಿರ್ಮಾಣ ಮಾಡಲಾಯಿತು. 2014 ರಲ್ಲಿ ರಥದ ನಿರ್ಮಾಣ ಮಾಡಿ ಅದೇ ವರ್ಷ ಶ್ರೀ ಬಸವ ಜಯಂತಿ ದಿನಂದಂದು ರಥೋತ್ಸವ ಆರಂಭಕ್ಕೆ ಸಲಹೆ ಸೂಚನೆಗಳ ನೀಡಿದ ಪ್ರಯುಕ್ತ ಅದೇ ವರ್ಷದಿಂದ ಜಾತ್ರಾ ಮಹೋತ್ಸವ ಆರಂಭ ಆಯಿತು. ಅಂದಿನಿಂದ ಇಂದಿನವರೆಗೂ ಭಕ್ತಿ ಭಾವದಿಂದ ರಥೋತ್ಸವ ನಡೆಸಿಕೊಂಡು ಬರಲಾಯಿತು.
ಈ ಎರಡು ದೇವಸ್ಥಾನಗಳಿಗೆ ಭಕ್ತರ ದಂಡೆ ಹೆಚ್ಚಾಯಿತು.ಯಾವುದೇ ಶುಭ ಕಾರ್ಯ ಮಾಡಬೇಕೆಂದರೆ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು, ಗಣ್ಯರು ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಗಣಪತಿ ದೇವರ ಆರ್ಶೀವಾದ ಪಡೆದೇ ಆರಂಭ ಮಾಡುತ್ತಾರೆ. ಕಲಿಯುಗದಲ್ಲಿಯೂ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಬಲ್ಲ ಬಲಮುರಿ ಗಣಪತಿ ಪ್ರಸಿದ್ಶಿ ಆಗಿದೆ. ದೈವಾದಿ ಪುರಷನಾಗಿ ಪ್ರಸಿದ್ದಿ ಪಡೆದು ಭಕ್ತರ ಮನದಲ್ಲಿ ಮನೆ ಮಾಡಿರುವ ಬಲಮುರಿ ಶ್ರೀ ಗಣಪತಿ ಹಾಗೂ ವೀರಭದ್ರೇಶ್ವರ ಜಾತ್ರೆ ಈ ಭಾಗದಲ್ಲಿಯೇ ಖ್ಯಾತಿ ಪಡೆದಿದೆ.
ಈ ದೇವಸ್ಥಾನಗಳ ಅಭಿವೃದ್ಧಿಗಾಗಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿರುವ ಎಸ್ ಬಿ. ಸವದತ್ತಿ ಅವರು ತಮ್ಮ ತನು ಮನ ಧನದಿಂದ ಹಗಲಿರುಳು ಶ್ರಮಿಸಿ ಒಂದು ಹಂತಕ್ಕೆ ತಂದಿದ್ದಾರೆ. ಯಾವುದೇ ಕಾರ್ಯ ಸಿದ್ಧಿ ಆಗಬೇಕು ಎಂದರೆ ಗುರಿ ಮತ್ತು ಛಲದೊಂದಿಗೆ ಮುಂದಾದ ಸವದತ್ತಿ ಅವರು ಹಿಡಿದ ಕಾರ್ಯ ಕೈಬಿದೇ ಯಾವುದೇ ಟೀಕೆ ಟಿಪ್ಪಣಿಗಳು ಬಂದರೂ ಅದಕ್ಕೆ ಕಿವಿಕೊಡದೇ ಸೇವೆ ಮಾಡಿ ಉಭಯ ದೇವಸ್ಥಾನಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ನಿಂತಿದ್ದಾರೆ.
ಈಗ ರಚನೆಗೊಂಡಿರುವ ಕಮಿಟಿಯಮ್ನ ಪದಾಧಿಕಾರಿಗಳ ಹಾಗೂ ಭಕ್ತರ ಜೊತೆಗೆ ಅನೇಕ ಸಾಮಾಜಿಕ ಕಾರ್ಯ ,ಜಾತ್ರಾ ಮಹೋತ್ಸವನ್ನ ಅತ್ಯಂತ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರತಾ ಇದ್ದಾರೆ.ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನ ಯೋಜನೆ ಹಾಕಿಕೊಂಡಿದೆ. ವಸತಿಗೃಹಗಳು, ಕಲ್ಯಾಣ ಮಂಟಪ ಸೇರಿದಂತೆ ಅಗತ್ಯ ಸೌಕರ್ಯ ನಿರ್ಮಾಣಕ್ಕೆ ಮುಂದಾಗಿದೆ.
ಈಗಾಗಲೇ ಈ ದೇವಸ್ಥಾನಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಿದ ಉದ್ಯಮಿ ವಿಜಯ ಸಂಕೇಶ್ವರ,ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ , ಅಂದಿನ ಮಹಾನಗರ ಪಾಲಿಕೆ ಜನಪ್ರಿಯ ಪಾಲಿಕೆ ಸದಸ್ಯರಾಗಿದ್ದ ಲಕ್ಷ್ಮಣ ಹಿರೇಕೆರೂರ ಅವರ ಸೇವೆ ಸ್ಮರಣೀಯ.