ಹುಬ್ಬಳ್ಳಿ; ಶ್ರೀ ಬಸವೇಶ್ವರರು ಕೇವಲ ಎಂಟು ವರ್ಷದವರಿದ್ದಾಗ ಹಿಂದುಳಿದ ಹಾಗೂ ಶೋಷಿತ ವರ್ಗದವರ ಬಗ್ಗೆ ಚಿಂತನೆ ಮಾಡಿದ್ದರು ಮೇಲು ಕೀಳು ತಾರತಮ್ಯ ಮಾಡಿದರೆ ನಾನು ಮನೆಯಲ್ಲಿ ಇರಲ್ಲ ಎಂದು ಮನೆ ತೊರೆದು ಜಗತ್ತು ಉದ್ಧಾರ ಮಾಡಿದ ಮಹಾನ್ ಚೇತನ ಶ್ರೀ ಬಸವೇಶ್ವರರು ಎಂದು ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ಮೂರು ಸಾವಿರ ಮಠದ ವೀರಶೈವ ಸಂಘಟನಾ ಸಮಿತಿ ವತಿಯಿಂದ ನಗರದ ಮೂರುಸಾವಿರಹ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು,
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಹೆಣ್ಣು ಗಂಡು ಮೇಲು ಕೀಳು ಬಡವ. ಬಲ್ಲಿದವ ಎನ್ನದೇ ಸಮಾನತೆ ಸಾರಿಗೆ ಮಹಾಗುರು. ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಅವರು ಎಲ್ಲ ರಂಗದಲ್ಲಿ ಸಹ ಮುಂದೆ ಬರಬೇಕು ಎಂಬ ನಿಟ್ಟಿನಲ್ಲಿ ಸಮಾನ ಅವಕಾಶ ಕೊಟ್ಟವರು. ಬಸವೇಶ್ವರರು ಅನುಭವ ಮಂಟಪದಲ್ಲಿ ಹೇಗೆ ಸಮಾನತೆ ಕೊಟ್ಟು ಜಗತ್ತಿಗೆ ಹೊಸ ಸಂದೇಶ ನೀಡಿದವರು. ಕೊರಳಿಗೆ ಲಿಂಗ ಕಟ್ಟಿ ಲಿಂಗ ಪೂಜೆಗೆ ಸಹ ಅವಕಾಶ ನೀಡಿದವರು ಎಂದರು.
ಗದಗ ಜಿಲ್ಲೆಯ ನರಗುಂದದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಣ್ಣ ಬಸವೇಶ್ವರರ ಆಧ್ಯಾತ್ಮಿಕ ದೃಷ್ಟಿಕೋನದ ಬಗ್ಗೆ ತಿಳುವಳಿಕೆ ಮೂಡಿಸಿದರು.ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವ ಜಯಂತಿ ಮಹತ್ವ ಹಾಗೂ ಬಸವಣ್ಣನವರ ವಚನಗಳ ಬಗ್ಗೆ ತಿಳಿಹೇಳಿದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಸದಾನಂದ ಡಂಗನವರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪ ಮೇಯರ್ ದುರ್ಗಮ್ಮ ಬಿಜವಾಡ, ಪ್ರವೀಣ ಕುಬಸದ, ರತ್ನಾ ಗಂಗಣ್ಣವರ, ಅಶೋಕ ಮೀಶೆ, ಚನ್ನಬಸಪ್ಪ ಧಾರವಾಡಶೆಟ್ಟರ, ಈರಪ್ಪ ಎಮ್ಮಿ ಮುಂತಾದವರು ಭಾಗವಹಿಸಿದ್ದರು.