ಗದಗ: ಅಯೋಧ್ಯೆ ಶ್ರೀ ರಾಮಲಲ್ಲ ಮೂರ್ತಿ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಹಾಗೂ ಅವರ ತಾಯಿ ಇಂದು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಭೇಟಿಯನ್ನ ನೀಡಿದ್ರು. ಈ ವೇಳೆ ಭವನದ ಅಭಿವೃದ್ಧಿಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ವಿಶ್ವಕರ್ಮ ಸಮಾಜದ ವತಿಯಿಂದ ಅರುಣ್ ಯೋಗಿರಾಜ್ ಮತ್ತು ಅವರ ತಾಯಿಯವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್ ಡಿ ಕಡ್ಲಿಕೊಪ್ಪ, ಶ್ರೀ ವಿಶ್ವಕರ್ಮ ಯುವ ಪರಿಷತ್ ಅಧ್ಯಕ್ಷ ಮಹೇಶ್ ಕಮ್ಮಾರ, ಶ್ರೀ ವಿಶ್ವಕರ್ಮ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವೀರಣ್ಣ ಹಲವಾಗಲಿ ಸೇರಿದಂತೆ ವಿಶ್ವಕರ್ಮ ಸಮಾಜದ ಶಂಕರಾಚಾರ್ಯ ಪತ್ತಾರ, ಕುಮಾರ ಬಡಿಗೇರ, ಹರೀಶ್ ಕಮ್ಮಾರ, ಈರಣ್ಣ ಪತ್ತಾರ, ಈಶ್ವರ್ ಪತ್ತಾರ, ಶಂಕರಾಚಾರ್ಯ ಕಂಚಗಾರ, ರಮೇಶ್ ಬಡಿಗೇರ, ವಿಜಯ್ ರಾಜನಾಳ, ಮೌನೇಶ್ ಪತ್ತಾರ, ರಾಘು ಶಿಲ್ಪಿ, ಸುರೇಶ ಗುಂಜಾಳ, ರಾಘವೇಂದ್ರ ಬಡಿಗೇರ, ಮಧುಸೂದನ್ ವಿಶ್ವಕರ್ಮ ಸೇರಿದಂತೆ ಇತರರು ಇದ್ದರು.