ಕನ್ನಡದ ನಟಿ ಶ್ರೀಲೀಲಾ ರಶ್ಮಿಕಾ ಮಂದಣ್ಣ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಕನ್ನಡ ಕಿಸ್ ಚಿತ್ರರಂಗದಿಂದ ಜರ್ನಿ ಶುರು ಮಾಡಿ ಒಂದಷ್ಟು ಚಿತ್ರಗಳ ಬಳಿಕ ತೆಲುಗಿನತ್ತ ಹೆಜ್ಜೆ ಹಾಕಿದರು. ಟಾಲಿವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಈಗ ಬಾಲಿವುಡ್ ಗೆ ಹಾರಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಚೊಚ್ಚಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಜೋಡಿ ನಟಿಸಿರುವ ಹೊಸ ಸಿನಿಮಾದ ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಬೆಸ್ಟ್ ಜೋಡಿ ಎನ್ನುತ್ತಿದ್ದಾರೆ. ಶ್ರೀಲೀಲಾ ಕಾರ್ತಿಕ್ ಆರ್ಯನ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಲ್ಲಿದೆ.
ಶ್ರೀಲೀಲಾ-ಕಾರ್ತಿಕ್ ಆರ್ಯನ್ ಹೊಸ ಚಿತ್ರಕ್ಕೆ ಆಶಿಕಿ-3 ಎಂಬ ಟೈಟಲ್ ಇಡಲಿದೆ ಚಿತ್ರತಂಡ ಎಂಬ ನಿರೀಕ್ಷೆ ಇದೆ. ಸದ್ಯ ಸಿಕ್ಕಿಂನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರೀಕರಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಗಿಟಾರ್ ಹಿಡಿದು ಹಾಡು ಹೇಳುತ್ತಿರುವ ಕಾರ್ತಿಕ್ ಆರ್ಯನ್ ಪಕ್ಕ ಶ್ರೀಲೀಲಾ ನಿಂತಿದ್ದಾರೆ. ಈ ವೇಲೆ ವೇದಿಕೆ ಮೇಲೆ ಬಂದ ವ್ಯಕ್ತಿ ಮೇಲೆ ಕಾರ್ತಿಕ್ ಗಿಟಾರ್ ನಿಂದ ಹಲ್ಲೆ ಮಾಡಿದ್ದಾರೆ. ಇದು ಅಸಲಿಗೆ ಚಿತ್ರದ ದೃಶ್ಯ.
ಮೊದಲೇ ಹೇಳಿದಂಗೆ ಆಶಿಕಿ-3 ಸಿನಿಮಾದ ಶೂಟಿಂಗ್ ಸಿಕ್ಕಿಂನಲ್ಲಿ ನಡೆಯುತ್ತಿರುವುದರಿಂದ ಇಡೀ ಚಿತ್ರತಂಡ ಅಲ್ಲಿನ ಮುಖ್ಯಮಂತ್ರಿವರಯನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನಿವಾಸಗೆ ನಟಿ ಶ್ರೀಲೀಲಾ, ನಟ ಕಾರ್ತಿಕ್ ಆರ್ಯನ್, ನಿರ್ದೇಶಕ ಅನುರಾಗ್ ಬಸು, ಶ್ರೀಲೀಲಾ ತಾಯಿ ಭೇಟಿ ಕೊಟ್ಟರು. ಈ ವೇಳೆ ಪ್ರೇಮ್ ಸಿಂಗ್ ತಮಾಂಗ್ ಶ್ರೀಲೀಲಾ ಕಾರ್ತಿಕ್ ಆರ್ಯನ್ ಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.