ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮಮ್ಮಿಯಾಗಿ ಬಡ್ತಿ ಪಡೆದ್ದು ಆಗಿದೆ. ಸದ್ಯ ಮಗಳ, ಮನೆ, ಗಂಡ ಅಂತಾ ಬ್ಯುಸಿಯಾಗಿರುವ ಡಿಪ್ಪಿ ಈಗ ಶಾರುಖ್ ಖಾನ್ ಮಗಳಿಗೆ ತಾಯಿಯಾಗ್ತಿದ್ದಾರೆ. ಅರೇ! ನಿಜವಾ ಅಂತಾ ಅಚ್ಚರಿಪಡಬೇಡಿ. ಇದು ಸತ್ಯವೇ. ಆದರೆ ರಿಯಲ್ ನಲ್ಲಲ್ಲ. ಬದಲಾಗಿ ರೀಲ್ ನಲ್ಲಿ.
ದೀಪಿಕಾ ಪಡುಕೋಣೆ ಸಣ್ಣ ಗ್ಯಾಂಪ್ ಗಳಿಗೆ ಮತ್ತೆ ಇಂಡಸ್ಟ್ರೀಯತ್ತ ಮುಖ ಮಾಡುತ್ತಿರುವ ಹೊಸ ವಿಷಯ ಹೊರಬಿದ್ದಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಕಿಂಗ್ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಎಂಟ್ರಿಯಾಗುತ್ತಿದ್ದಾರೆ. ಸುಹಾನಾ ತಾಯಿ ಪಾತ್ರ ಪೋಷಣೆ ಮಾಡಲಿದ್ದಾರಂತೆ ಬಿಟೌನ್ ಪದ್ಮಾವತಿ.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ದೀಪಿಕಾ ತಾಯಿ ಪಾತ್ರದಲ್ಲಿ ನಟಿಸಿದ್ದು. ಆ ನಂತರ ‘ಜವಾನ್’ ಸಿನಿಮಾದಲ್ಲೂ ಅದೇ ಪಾತ್ರ ಅವರನ್ನು ಹುಡುಕಿಕೊಂಡು ಬಂದಿತ್ತು, ಈಗ ಮತ್ತೊಮ್ಮೆ ಸುಹಾನಾ ತಾಯಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿದ್ದಾರ್ಥ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಪಠಾಣ್’, ‘ಫೈಟರ್’ ಚಿತ್ರದಲ್ಲಿ ದೀಪಿಕಾ ನಟಿಸಿದ್ದರು. ಇದೀಗ ಅವರಿಗೆ ಮತ್ತೊಮ್ಮೆ ಸಿದ್ದಾರ್ಥ್ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ.