ಭಾರತೀಯ ಚಿತ್ರರಂಗ ಕಂಡ ಸ್ಟಾರ್ ಸಿನಿಮಾ ಮೇಕರ್ ಎಸ್ ಎಸ್ ರಾಜಮೌಳಿ ಪೌರಾಣಿಕ ಸಿನಿಮಾಗಳನ್ನು ತೆರೆಮೇಲೆ ಅನಾವರಣ ಮಾಡುವಲ್ಲಿ ನಿಸ್ಸೀಮರು. ಇಂತಹ ಜಕ್ಕಣ್ಣನಿಗೆ ಮಹಾಭಾರತವನ್ನು ಬೆಳ್ಳಿತೆರೆಯಲ್ಲಿ ತರುವ ದೊಡ್ಡ ಕನಸಿದೆ. ಹತ್ತು ಭಾಗದಲ್ಲಿ ಮಹಾಭಾರತ ಸಿನಿಮಾ ಮಾಡುವ ಗುರಿ ಅವರಿಗಿದೆ. ಈ ಬಿಗ್ ಪ್ರಾಜೆಕ್ಟ್ನಲ್ಲಿ ಯಾವ ಸೂಪರ್ ಸ್ಟಾರ್ ಇರಲಿದ್ದಾರೆ ಎಂಬ ಕುತೂಹಲವಂತೂ ಇದ್ದೇ ಇದೆ.
ಮಹಾಭಾರತ ಸಿನಿಮಾ ರಾಜಮೌಳಿಯ ಡ್ರೀಮ್ ಪ್ರಾಜೆಕ್ಟ್. ತಮ್ಮ ಚಿತ್ರ ಕೇವಲ ತೆಲುಗು ಜನರಿಗೆ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಜನರಿಗೆ ತಲುಪಿಸೋದೆ ರಾಜಮೌಳಿಯವರ ಯೋಜನೆ. ಮಹಾಭಾರತ ಸಿನಿಮಾ ವಿಶ್ವ ಸಿನಿಮಾರಂಗದಲ್ಲೇ ಮೆರೆಯಬೇಕು ಅನ್ನೋದು ಇವರ ಕನಸು. ‘ಅವೆಂಜರ್ಸ್’ ಮತ್ತು ‘ಅವತಾರ್’ ಮಾದರಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ ರಾಜಮೌಳಿ. ಅದಕ್ಕಾಗಿ ಯಾವ ತಾರೆಯರು ಬಣ್ಣ ಹಚ್ಚಲಿದ್ದಾರೆ ಅನ್ನೋದು ಸಸ್ಪೆನ್ಸ್. ಆದ್ರೀಗ ಇದೀಗ ರಾಜಮೌಳಿ ತಮ್ಮ ಮಹಾಭಾರತದಲ್ಲಿ ಆ ಸ್ಟಾರ್ ಹೀರೋಗೆ ಪಾತ್ರವೊಂದನ್ನು ಖಾಯಂಗೊಳಿಸಿದ್ದಾರೆ.
ಜಕ್ಕಣ್ಣನ ಮಹಾಭಾರತದಲ್ಲಿ ನ್ಯಾಚುರಲ್ ಸ್ಟಾರ್ ನಾನಿಗೆ ಪಾತ್ರವೊಂದು ಖಾಯಂ ಆಗಿದೆ. ನಾನಿ ನಟನೆಯ ‘ಹಿಟ್- 3’ ಸಿನಿಮಾ ಪ್ರೀ ರಿಲೀಸ್ ಈವೆಂಟ್ ವೇಳೆ ವಿಶೇಷ ಅತಿಥಿಯಾಗಿ ಬಂದಿದ್ದ ನಿರ್ದೇಶಕ ರಾಜಮೌಳಿ ಈ ಸಂದರ್ಭದಲ್ಲಿ ಮಹಾಭಾರತ ಚಿತ್ರದ ವಿಷಯವನ್ನು ರಿವೀಲ್ ಮಾಡಿದ್ದಾರೆ.
Definitely #Nani will be part of my film based on Mahabharata says #SSRajamouli. pic.twitter.com/hvdcDKjnKp
— Films Spicy (@Films_Spicy) April 28, 2025
ನಿರೂಪಕಿ ಸುಮಾ, ರಾಜಮೌಳಿ ಸರ್ ನೀವು ನಿರ್ದೇಶನದ ‘ಮಹಾಭಾರತ’ ಚಿತ್ರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ನಾನಿ ಕೂಡ ನಟಿಸುತ್ತಾರೆ. ಅವರಿಗೆ ಒಂದು ಪಾತ್ರ ಫಿಕ್ಸ್ ಆಗಿದೆ ಎನ್ನುವ ಊಹಾಪೋಹ ಇದೆಯಂತೆ ನಿಜವೇ? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೌಳಿ, “ಹೌದು ನಾನಿ ಆ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ನಿಜ” ಎಂದಿದ್ದಾರೆ. ಆದರೆ ಯಾವ ಪಾತ್ರದ ಗುಟ್ಟನ್ನು ಜಕ್ಕಣ್ಣ ಬಿಟ್ಟುಕೊಟ್ಟಿಲ್ಲ.
‘ಮಹಾಭಾರತ’ ಕಥೆಯಲ್ಲಿ ಸಾಕಷ್ಟು ಅದ್ಭುತ ಪಾತ್ರಗಳಿವೆ. ನಟ ನಾನಿಗೆ ಯಾವ ಪಾತ್ರ ಸಿಗಬಹುದು? ಅನ್ನೋದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಸದ್ಯ ರಾಜಮೌಳಿ ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಬ್ಯುಸಿಯಲ್ಲಿದ್ದಾರೆ. ಈ ಚಿತ್ರದ ಬಳಿಕ ಮಹಾಭಾರತ ಸಿನಿಮಾ ಟೇಕಾಫ್ ಆಗಬಹುದು ಎಂಬ ನಿರೀಕ್ಷೆ ಇದೆ.