ಶಿವಮೊಗ್ಗ: ಕುಗ್ರಾಮವೊಂದರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದು ಬಹುದೊಡ್ಡ ಸಾಧನೆ ಮಾಡಿದ್ದಾಳೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಟ್ಟಕಡೆಯ ಗಡಿಗ್ರಾಮ, ತಾಲೂಕು ಕೇಂದ್ರದಿಂದ ೬೦ ಕಿ. ಮೀ ದೂರದ ಬಿಳಿಗಾರು ಸರ್ಕಾರಿ ಕನ್ನಡ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ದಿಶಾ ಹೆಚ್ಆರ್ 625 ಅಂಕಗಳಲ್ಲಿ 621 ಅಂಕಗಳನ್ನು ಪಡೆಯುವ ಮೂಲಕ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಬಹುತೇಕ ಶರಾವತಿ ಡ್ಯಾಂ ಮುಳುಗಡೆ ಸಂತ್ರಸ್ಥರೇ ಹೊಂದಿರುವ ಬಿಳಿಗಾರು ಸರ್ಕಾರರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ದಿಶಾ ಗಮನಾರ್ಹ ಸಾಧನೆ ಮಾಡಿದ್ದಾಳೆ.
SSLC EXAM ; ಶ್ರೀ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ಸಿ.ಭಾವನ ರಾಜ್ಯಕ್ಕೆ ಟಾಪರ್
ಇಷ್ಟೇ ಅಲ್ಲ,27 ಮಕ್ಕಳು 10ನೇ ತರಗತಿಯಲ್ಲಿ ಓದುತ್ತಿದ್ದು, ಒಟ್ಟು ಶೇ.99.36ರಷ್ಟು ಫಲಿತಾಂಶ ದಾಖಲಿಸಿ ಕುಗ್ರಾಮವಾದ ಬಿಳಿಗಾರು ಸರ್ಕಾರಿ ಪ್ರೌಢಶಾಲೆ ರಾಜ್ಯದ ಗಮನ ಸೆಳೆದಿದೆ. ಬಿಳಿಗಾರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಕೆ.ಪಿ ಶ್ರೀಧರ್ ಹಾಗೂ ಶಿಕ್ಷಕರ ತಂಡ ದಿಶಾ ಹಾಗೂ ಉಳಿದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.