ತುಮಕೂರು : ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯದ ಟಾಪರ್ ಪಟ್ಟಿಯಲ್ಲಿದ್ದಾರೆ.
ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ ತಲಾ ಒಬ್ಬರು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಜಿಲ್ಲೆಗೆ ಕೀರ್ತಿ ತಂದಿದೆ. ತುಮಕೂರಿನ ಚೇತನ ವಿದ್ಯಾ ಮಂದಿರ ಶಾಲೆಯ ಮಹಮದ್ ಮನ್ಸೂರ್ ಅದಿಲ್, ಮಧುಗಿರಿಯ ಚಿರಾಕ್ ಪಬ್ಲಿಕ್ ಶಾಲೆಯ ಯಶ್ವಿತಾ ರೆಡ್ಡಿ ಕೆ ಬಿ. ಟಾಪರ್ ಪಟ್ಟಿಯಲ್ಲಿದ್ದಾರೆ.
SSLC ಫಲಿತಾಂಶ ಪ್ರಕಟ ; 625ಕ್ಕೆ 625 ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳು
ಕೆ ವಿ ಬಾಬು ರೆಡ್ಡಿ ಹಾಗೂ ಸಂಧ್ಯಾ ರೆಡ್ಡಿ ಪುತ್ರಿ ಯಶ್ವಿತಾ ರೆಡ್ಡಿ ಮತ್ತು ಅದಿಲ್ ಹಾಗೂ ಅಫ್ರೋಜ್ ಜಹಾನ್ ದಂಪತಿಯ ಪುತ್ರ ಮಹಮದ್ ಮನ್ಸೂರ್ ಇಬ್ಬರು 625 ಕ್ಕೆ 625 ಅಂಕಗಳಿಸಿ ರಾಜ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. ಚೇತನಾ ಶಾಲೆ ಹಾಗೂ ಚಿರಾಕ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದೆ.