ಬೆಳಗಾವಿ : ರಾಯಬಾಗ ತಾಲೂಕಿನ ಇಟ್ನಾಳ್ ಗ್ರಾಮ ಪಂಚಾಯತ್ ನ ಸಿಬ್ಬಂದಿ ಯುಗಾದಿ ಹಬ್ಬದ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಸಿಬ್ಬಂದಿಗಳಿಲ್ಲದೆ ಗ್ರಾಮ ಪಂಚಾಯತಿ ಕಚೇರಿ ಬಿಕೋ ಅಂತಿದೆ.
ಎಸ್.. ಡ್ಯುಟಿ ಟೈಂನಲ್ಲಿ ಕೆಲಸಕ್ಕೆ ಚಕ್ಕರ ಹಾಕಿರೋ ಗ್ರಾಮ ಪಂಚಾಯತ ಪಿಡಿಓ ಹಾಗೂ ಸಿಬ್ಬಂದಿ ಯುಗಾದಿ ಶಾಪಿಂಗ್ ಹೋಗಿದ್ದು, ಮಧ್ಯಾಹ್ನ 12 ಗಂಟೆಯಾದರೂ ಕೂಡ ಯಾವುದೇ ಸಿಬ್ಬಂದಿ ಕಾಣ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದ್ರು ಡೋಂಟ್ ಕೇರ್ ಅಂತಿದ್ದಾರೆ. ಕೆಲಸಕ್ಕೆ ಚಕ್ಕರ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.