ಕಲಘಟಗಿ : ನಿನ್ನೆ ಮಧ್ಯಾಹ್ನ ಕಲಘಟಗಿ ಪಟ್ಟಣದಲ್ಲಿ ರಾಜ್ಯಮಟ್ಟದ ಆಹಾರ ಆಯೋಗ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು ತಾಲೂಕ ಮಟ್ಟದ ಅಧಿಕಾರಿಗಳ ಎದೆ ನಡುಗಿಸಿದ್ದಾರೆ.
ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ: ಎಚ್ ಕೃಷ್ಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ಪಟ್ಟಣದಲ್ಲಿ ಇರುವ ನ್ಯಾಯ ಬೆಲೆ ಅಂಗಡಿ ಹಾಗೂ ಅಕ್ರಮ ಅಕ್ಕಿ ಗೋದಾಮಗಳಿಗೆ ಭೇಟಿ ನೀಡಿ ಅಕ್ಕಿಗಳನ್ನು ವಶ ಪಡಿಸಿಕೊಂಡರು.
ತನಿಖೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಿಟ್ಟಿರುವ ಅಕ್ಕಿ ಗೋದಾಮಿಗೆ ಭೇಟಿ ನೀಡಿ ಬೀಗ ಒಡೆದು ಒಳಗಡೆ ಇರುವ 13 ಕ್ವಿಂಟಲ್ ಅನ್ನ ಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡು ಅವರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಅಷ್ಟೆ ಅಲ್ಲದೇ ಪಟ್ಟಣದ ಗ್ಯಾಸ್ ಏಜನ್ಸಿ ಕಚೇರಿಗೆ ಭೇಟಿ ನೀಡಿ ಅಲ್ಲಿ ಇಡಲಾಗಿದ್ದ ಸಿಲಿಂಡರ್ ಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅದೇ ರೀತಿ ರೈಸ್ ಮಿಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾರುತಿ ಲಮಾಣಿ, AIN ನ್ಯೂಸ್, ಕಲಘಟಗಿ